ಈ ಬಾರಿ ಜಿಡಿಪಿ ಗುರಿ ಕೇವಲ ಶೇ.5, 10 ವರ್ಷಗಳಲ್ಲೇ ಇದು ಕಡಿಮೆ
2012-13ರಲ್ಲಿ ಭಾರತದ ಆರ್ಥಿಕ ನೀತಿಯಲ್ಲಿ ಒಟ್ಟು ತಲಾ ಆದಾಯ (ಜಿಡಿಪಿ)ವನ್ನು ಶೇ. 5ರಷ್ಟು ಪ್ರಗತಿ ಹೊಂದುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ನವದೆಹಲಿ: 2012-13ರಲ್ಲಿ ಭಾರತದ ಆರ್ಥಿಕ ನೀತಿಯಲ್ಲಿ ಒಟ್ಟು ತಲಾ ಆದಾಯ (ಜಿಡಿಪಿ)ವನ್ನು ಶೇ. 5ರಷ್ಟು ಪ್ರಗತಿ ಹೊಂದುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಮೂಲಕ ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತಲಾ ಆದಾಯದಲ್ಲಿ ಸರ್ಕಾರ ಅತಿ ಕಡಿಮೆ ಜಿಡಿಪಿ ಪ್ರಗತಿಯ ಗುರಿ ಹೊಂದಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಇಂದು ಕೇಂದ್ರ ಅಂಕಿ ಅಂಶಗಳ ಸಂಸ್ಥೆ (ಸಿಎಸ್ಓ) ಅತಿ ಕಡಿಮೆ ಅಂದರೆ ಶೇ. 5ರಷ್ಟು ತಲಾ ಆದಾಯದ ಯೋಜನೆಯನ್ನು ರೂಪಿಸಿದೆ. ಆದರೆ 2011-13ರಲ್ಲಿ ಜಿಡಿಪಿಯಲ್ಲಿ ಶೇ. 6.21 ರಷ್ಟು ಪ್ರಗತಿ ಸಾಧಿಸುವ ಗುರಿಯನ್ನು ಸಿಎಸ್ಓ ಹಾಕಿಕೊಂಡಿತ್ತು.
ಕೇಂದ್ರ ಸರ್ಕಾರದ ವಿಫಲ ನೀತಿಗಳಿಂದ ಕಳೆದ 10ವರ್ಷಗಳಲ್ಲಿ ಸೇವಾ ವಲಯ, ಕೃಷಿ, ಉತ್ಪಾದನಾ ವಲಯಗಳ ಬೆಳವಣಿಗೆಯಲ್ಲಿ ಗಣನೀಯ ಕುಂಠಿತವಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. 2013ರ ಕೊನೆಯಲ್ಲಿ ಉತ್ಪಾದನಾ ವಲಯದಲ್ಲಿ ಶೇ. 1.9 ರಷ್ಟು, ಕೃಷಿಯಲ್ಲಿ 2.7ರಷ್ಟು ಬೆಳವಣಿಗೆ ಕುಂಠಿತವಾಗಲಿದೆ ಎಂದು ಸಿಎಸ್ಓ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


