ಈಗಿನ ಸುದ್ದಿ

ಖಾಸಗಿ ವಿವಿ ವಿಧೇಯಕ ಮಂಡನೆ

ತೀವ್ರ ವಿರೋಧದ ನಡುವೆಯೂ ಖಾಸಗಿ ವಿಶ್ವ ವಿದ್ಯಾಲಯ ವಿಧೇಯಕ ಮಂಡನೆ

Published On :

ಬೆಂಗಳೂರು: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಖಾಸಗಿ ವಿಶ್ವ ವಿದ್ಯಾಲಯ ವಿಧೇಯಕವನ್ನು ವಿಧಾನ ಪರಿಷತ್‌ನಲ್ಲಿ ಗುರುವಾರ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಮಂಡಿಸಿದ್ದಾರೆ.

ಪ್ರೆಸಿಡೆನ್ಸಿ, ಸಿ.ಎಂ.ಆರ್, ನ್ಯೂ ಬಾಲ್ಡ್‌ವಿನ್ ವಿವಿ ಒಟ್ಟು 3 ಖಾಸಗಿ ವಿವಿ ವಿಧೇಯಕಗಳು ವಿಧಾನ ಪರಿಷತ್‌ನಲ್ಲಿ ಮಂಡನೆಯಾಗಿವೆ. ಸಿ.ಟಿ.ರವಿ ವಿಧೇಯಕ ಮಂಡಿಸುತ್ತಿರುವ ಸಂದರ್ಭದಲ್ಲಿ ಜೆಡಿಎಸ್‌ನ ಬಸವರಾಜ್ ಹೊರಟ್ಟಿ, ನಾಣಯ್ಯ ವಿಧೇಯಕ ಮಂಡನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕೇಲಕಾಲ ಇವರ ನಡುವೆ ಮಾತಿನ ಜಟಾಪಟಿ ಉಂಟಾಯಿತು.

ಖಾಸಗಿ ವಿವಿ ವಿಧೇಯಕ ರಾಜ್ಯಕ್ಕೆ ಮಾರಕ, ಇದರಿಂದ ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂಬ ವಿರೋಧ ಪಕ್ಷಗಳ ವಿರೋಧದ ನಡುವೆ ಸಿ.ಟಿ ರವಿ ವಿಧೇಯಕ ಮಂಡಿಸಿದರು.

ಆದರೆ ಸಿ.ಟಿ.ರವಿ ಈ ಮುಂಚಿನಿಂದಲೂ ಈ ವಿಧೇಯಕದಿಂದ ರಾಜ್ಯದಲ್ಲಿ ಉತ್ತಮ ವಿಶ್ವ ವಿದ್ಯಾಲಯಗಳು ಸ್ಥಾಪಿತವಾಗುತ್ತವೆ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.