ಬಜೆಟ್: 43 ಹೊಸ ತಾಲೂಕುಗಳ ಘೋಷಣೆ
ಹೊಸ ತಾಲೂಕುಗಳ ರಚನೆಗೆ ಬಜೆಟ್‌ನಲ್ಲಿ 86 ಕೋಟಿ ರುಪಾಯಿ ಅನುದಾನ ನೀಡಲಾಗಿದ್ದು, ಪ್ರತಿ ತಾಲೂಕಿಗೆ ಕನಿಷ್ಟ 2 ಕೋಟಿ ರುಪಾಯಿ ಅನುದಾನ ದೊರಯಲಿದೆ..
ಬೆಂಗಳೂರು: ದಕ್ಷಿಣ ಭಾರತದ ಮೊದಲ ಬಿಜೆಪಿ ಸರ್ಕಾರದ ಕೊನೆಯ ಬಜೆಟ್‌ನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಶುಕ್ರವಾರ ಮಂಡಿಸಿದ್ದು, ಈ ಬಾರಿ ರಾಜ್ಯದ 16 ಜಿಲ್ಲೆಗಳಲ್ಲಿ 43 ಹೊಸ ತಾಲೂಕು ರಚನೆ ಮಾಡುವುದಾಗಿ ಘೋಷಿಸಿದ್ದಾರೆ.
ಹೊಸ ತಾಲೂಕುಗಳ ರಚನೆಗೆ ಬಜೆಟ್‌ನಲ್ಲಿ 86 ಕೋಟಿ ರುಪಾಯಿ ಅನುದಾನ ನೀಡಲಾಗಿದ್ದು, ಪ್ರತಿ ತಾಲೂಕಿಗೆ ಕನಿಷ್ಟ 2 ಕೋಟಿ ರುಪಾಯಿ ಅನುದಾನ ದೊರಯಲಿದೆ ಎಂದು ಶೆಟ್ಟರ್ ಹೇಳಿದ್ದಾರೆ.
ಪ್ರತಿಬಾರಿಯೂ ಮಾಧ್ಯಮ ಪ್ರತಿನಿಧಿಗಳಿಗೆ ಈ ಬಾರಿ ಬಜೆಟ್‌ನಲ್ಲಿ ಹೊಸ ತಾಲೂಕು ರಚನೆ ಘೋಷಿಸಿವುದಾಗಿ ಹೇಳಿಕೊಂಡು ಬರುತ್ತಿದ್ದ ಶೆಟ್ಟರ್ ಇಂದು ಕೊನೆಗೂ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಒಟ್ಟು 43 ಹೊಸ ತಾಲೂಕುಗಳನ್ನು ಘೋಷಿಸಿದ್ದಾರೆ.
ಹಲವು ದಿನಗಳಿಂದ ರಾಜ್ಯದ ಕೇಲವು ಪ್ರದೇಶಗಳು ತಾಲೂಕು ಮಟ್ಟಕ್ಕಿಂತ ಹೆಚ್ಚು ಜನ ಸಂಖ್ಯೆ ಹೊಂದಿದ್ದು ಮತ್ತು ಆ ಪ್ರದೇಶದಲ್ಲಿ ಹೆಚ್ಚಿನ ವ್ಯಾಪಾರ ವಹಿವಾಟುಗಳು ನಡೆಯುತ್ತಿರುವುದರಿಂದ ಆಯಾ ಭಾಗದ ಸ್ಥಳೀಯ ನಾಯಕರುಗಳು ತಾಲೂಕು ರಚನೆ ಮಾಡುವಂತೆ ಸಿಎಂ ಜಗದೀಶ್ ಶೆಟ್ಟರ್ ಅವರಲ್ಲಿ ಮನವಿ ಮಾಡಿದ್ದರು.
ಬಜೆಟ್‌ನಲ್ಲಿ ಘೋಷಿಸಿರುವ ನೂತನ ತಾಲೂಕುಗಳು ವಿವರ.
ಧಾರವಾಡ- ಹುಬ್ಬಳ್ಳಿ ನಗರ, ಅಣ್ಣಿಗೇರಿ, ಅಳ್ನಾವರ
ಬೆಳಗಾವಿ- ನಿಪ್ಪಾಣಿ
ಬಿಜಾಪುರ-ಬಬಲ್ಲೇಶ್ವರ, ತಾಳಿಕೋಟೆ
ಗದಗ-ಲಕ್ಷ್ಮೇಶ್ವರ, ಗಜೇಂದ್ರಗಢ
ಬಳ್ಳಾರಿ- ಕುರುಗೋಡು, ಕೋಟ್ಟೂರು
ದಕ್ಷಿಣ ಕನ್ನಡ- ಮೂಡುಬಿದರೆ, ಕಡಬ
ಗುಲ್ಬರ್ಗಾ,ಯಾದಗಿರಿ-ಕಮಲಾಪುರ, ಗುರುಮಿಟ್ಕಲ್, ವಡಗೇರೆ, ಯಡ್ರಾವಿ,ಕಾಳಗಿ, ಹುಣಸಗಿ
ಬಾಗಲಕೋಟೆ-ಗುಳೇದಗುಡ್ಡ, ರಬಕವಿ
ಉಡುಪಿ-ಬ್ರಹ್ಮಾವರ, ಬೈಂದೂರ್
ಚಾಮರಾಜನಗರ-ಹನ್ನೂರು
ರಾಯಚೂರು-ಮಸ್ಕಿ, ಶಿರವಾರ
ಬೆಂಗಳೂರು-ಯಲಹಂಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

