ಈಗಿನ ಸುದ್ದಿ

ಯೋಧರಿಂದ ಗುಂಡಿನ ದಾಳಿ: ಕಾಶ್ಮೀರದಲ್ಲಿ ಕರ್ಫೂ ಜಾರಿ

Published On :

ಶ್ರೀನಗರ: ಯೋಧರಿಂದ ಚಾಲಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಕಾಶ್ಮೀರದಲ್ಲಿ ಸ್ಥಳೀಯರು ನಡೆಸುತ್ತಿರುವ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಘಟನಾ ಸ್ಥಳದಲ್ಲಿ ಕರ್ಫೂ ಹೇರಲಾಗಿದೆ.

ಕಾಶ್ಮೀರದ ಶೋಫಿಯನ್ ನಗರದ ಹೊರವಲಯದಲ್ಲಿರುವ ಸಿಆರ್‌ಪಿಎಫ್ ಯೋಧರ ಗಾಗರಣ್ ಕ್ಯಾಂಪ್ ಬಳಿ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿದ್ದು, ಯೋಧರು ಉದ್ದೇಶ ಪೂರ್ವಕವಾಗಿಯೇ ಟ್ರಕ್ ಚಾಲಕ ಮಹಮದ್ ರಫಿ ರಾದರ್(28)ನನ್ನು ಹತ್ಯೆಗೈದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಆದರೆ ಗ್ರಾಮಸ್ಥರ ಆರೋಪವನ್ನು ನಿರಾಕರಿಸಿರುವ ಸಿಆರ್‌ಫಿಎಫ್ ಅಧಿಕಾರಿಗಳು ನಮ್ಮ ಯೋಧರಿಂದ ಯಾವುದೇ ರೀತಿಯ ಗುಂಡಿನ ದಾಳಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಸಿಆರ್‌ಪಿಎಫ್ ಹೇಳಿಕೆಯನ್ನು ಅಲ್ಲಗಳೆದಿರುವ ಗ್ರಾಮಸ್ಥರು, ಸಿಆರ್‌ಪಿಎಫ್ ಯೋಧರು ಯಾವುದೇ ಪ್ರಚೋದನೆ ಇಲ್ಲದೆ ಚಾಲಕನನ್ನು ಹತ್ಯೆಗೈದಿದ್ದಾರೆ. ಅಲ್ಲದೆ ಘಟನೆಯಲ್ಲಿ ಓರ್ವ ಶಾಲಾ ಬಾಲಕಿ ಸೇರಿದಂತೆ ಇಬ್ಬರಿಗೆ ಗುಂಡಿನ ಗಾಯಗಳಾಗಿವೆ ಎಂದು ಆರೋಪಿಸಿದ್ದಾರೆ.

ಒಟ್ಟಾರೆ ಗ್ರಾಮಸ್ಥರು ಮತ್ತು ಸಿಆರ್‌ಪಿಎಫ್ ನಡುವೆ ಉಂಟಾಗಿರುವ ಗಲಭೆಯಿಂದಾಗಿ ಕಾಶ್ಮೀರದ ಶೋಫಿಯನ್ ನಗರದ ಸುತ್ತಮುತ್ತಲ ಪ್ರದೇಶ ಪ್ರಕ್ಷುಬ್ಧಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.