ಈಗಿನ ಸುದ್ದಿ

ಮೋದಿಗೆ ಪಟ್ಟ: ವಿನಾಶ ಕಾಲೆ ವಿಪರೀತ ಬುದ್ಧಿ- ನಿತೀಶ್

ಮೋದಿಗೆ ಪಟ್ಟ: ವಿನಾಶ ಕಾಲೆ ವಿಪರೀತ ಬುದ್ಧಿ- ನಿತೀಶ್
Published On :

ಪಾಟ್ನಾ: ವಿನಾಶ ಕಾಲೆ ವಿಪರೀತ ಬುದ್ಧಿ, ಭಾರತ ಎಂದಿಗೂ ಒಡಕುಂಟು ಮಾಡುವ ನಾಯಕರನ್ನು ಸಹಿಸುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಿದ ನಂತರ ಇದೇ ಮೊದಲ ಬಾರಿಗೆ ಮಾತನಾಡಿರುವ ನಿತೀಶ್  ಕುಮಾರ್ ಅವರು, ಭಾರತ ಎಂದಿಗೂ ದೇಶದಲ್ಲಿ ಪರಸ್ಪರ ಒಡಕುಂಟು ಮಾಡುವ ಮತ್ತು ಒಡೆದು ಆಳುವ ನೀತಿ ಹೊಂದಿರುವ ನಾಯಕರನ್ನು ಸಹಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಕುರಿತು ಪಾಟ್ನಾದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿತೀಶ್ ಕುಮಾರ್ ಅವರು, 'ವಿನಾಶ ಕಾಲೆ ವಿಪರೀತ ಬುದ್ಧಿ', ದೇಶದ ಜನತೆ ಎಂದಿಗೂ ಒಡೆದು ಆಳುವ ನಾಯಕರನ್ನು ಸಹಿಸುವುದಿಲ್ಲ. ನಮಗಿನ್ನೂ 3 ತಿಂಗಳ ಕಾಲಾವಕಾಶವಿದ್ದು, ಯಾರನ್ನು ತಮ್ಮ ನಾಯಕರನ್ನಾಗಿ ಆರಿಸಬೇಕು ಎಂಬುದು ದೇಶದ ಜನರಿಗೆ ತಿಳಿದಿದೆ ಎಂದು ಹೇಳಿದರು.

ಎನ್‌ಡಿಎ ಮೈತ್ರಿ ಕೂಟದಲ್ಲಿ ಪ್ರಮುಖ ಅಂಗ ಪಕ್ಷವಾಗಿದ್ದ ಜೆಡಿಯು, ಕಳೆದ ಜೂನ್ 16 ರಂದು ಮೋದಿ ಅವರನ್ನು ಬಿಜೆಪಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಆರಿಸಿದ ನಂತರ ಎನ್‌ಡಿಎ ಸಖ್ಯ ತೊರೆದಿತ್ತು. ಅಂತೆಯೇ ಬಿಜೆಪಿ ಕೂಡ ಬಿಹಾರದಲ್ಲಿ ಜೆಡಿಯು ಪಕ್ಷಕ್ಕೆ ನೀಡಿದ್ದ ತನ್ನ ಬೆಂಬಲವನ್ನು ವಾಪಸ್ ಪಡೆಯುವ ಮೂಲಕ ನಿತೀಶ್ ನಿರ್ಧಾರವನ್ನು ಖಂಡಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.