ಬ'ಕೆಟ್' ಜರ್ನಲಿಸಮ್

ಪತ್ರಿಕೋದ್ಯಮ ಅತ್ಯಂತ ಪವಿತ್ರವಾದ ಕ್ಷೇತ್ರ ಎಂಬ ಅಭಿಪ್ರಾಯವನ್ನು...
ಬ'ಕೆಟ್' ಜರ್ನಲಿಸಮ್
Updated on: 

ಪತ್ರಿಕೋದ್ಯಮ ಅತ್ಯಂತ ಪವಿತ್ರವಾದ ಕ್ಷೇತ್ರ ಎಂಬ ಅಭಿಪ್ರಾಯವನ್ನು ಜನರು ಮತ್ತು ಪತ್ರಿಕೋದ್ಯಮ ಸೇರುವವರು ಹೊಂದಿದ್ದ ಕಾಲವೊಂದಿತ್ತು. ಬದಲಾದ ಕಾಲಘಟ್ಟದಲ್ಲಿ ಕೆಲವು ಅತಿ ಚಿಲ್ಲರೆ 'ಹರಿ'ಕಾರರಿಗೆ 'ಬಕೆಟ್ ಜರ್ನಲಿಸಮ್' ಅತ್ಯಂತ ಪ್ರಿಯವಾದ ಸಂಗತಿಯಾಗಿದೆ. ಇವರಿಗೆ ಬಕೆಟ್ ಹಿಡಿಯುವುದೇ ಕಾಯಕ. ಪತ್ರಿಕೋದ್ಯಮದ ಕನಿಷ್ಟ ನೀತಿ ನಿಯಮಗಳು ಗೊತ್ತಿಲ್ಲದವರೂ ಇಂದು ಪತ್ರಿಕೋದ್ಯಮದಲ್ಲಿ ಪ್ರಜ್ವಲಿಸುತ್ತಿದ್ದಾರೆ. ಇದೂ ಒಂದು ರೀತಿಯಲ್ಲಿ 'ಬ್ರಹ್ಮ ಲಿಖಿತ' ನಿಯಮವೇ ಸರಿ!
ಒಬ್ಬ ಮನುಷ್ಯ ಯಶಸ್ವಿಯಾಗಲು ಅಥವಾ ಒಬ್ಬ ವ್ಯಕ್ತಿ ಹೀರೋ ಆಗಲು, ಜನನಾಯಕನಾಗಲು ಮುಳ್ಳಿನ ಹಾದಿಯನ್ನು ತುಳಿದಿರುತ್ತಾನೆ. ಹಾಗಿರುವಾಗ ಅವಹೇಳನ ಮಾಡುವ ಅಥವಾ ಒಬ್ಬ ವ್ಯಕ್ತಿಯನ್ನು ನಾಶ ಮಾಡುವ, ವೃಕ್ತಿನಿಂದನೆ ಮಾಡುವ ಬರಹ ಯಾವ ಬಗೆಯ ಪತ್ರಿಕೋದ್ಯಮ? ಅಥವಾ ಯಾರನ್ನೋ ಓಲೈಕೆ ಮಾಡಲು ತಮ್ಮದೇ 'ಬ್ರಹ್ಮ'ಲಿಪಿ ಎನ್ನುವ ಭ್ರಮೆಯಲ್ಲಿರುವ ಅರೆ ಹುಚ್ಚರಿಗೆ ಏನಾದರೂ ಮದ್ದಿದೆಯೇ? ಆ ಬ್ರಹ್ಮನೇ ಬಲ್ಲ!
ಕನ್ನಡದ ಓದುಗ ಪ್ರಬುದ್ಧ. ಅವನಿಗೆ ಯಾವುದು ತುಚ್ಛ ಬರಹ ಮತ್ತು ಯಾವುದು ಕ್ಲಾಸಿಕ್ ಎಂಬುದರ ಅರಿವಿದೆ. ಹಾಗೆಯೇ ಒಂದು ಬರಹ ಓದಿದಾಗ ಆ ಬರಹವನ್ನು ನಿರ್ಭೀತಿಯಿಂದ ಬರೆದಿರುವನೋ? ಓಲೈಕೆ ಮಾಡಲು ಬರೆದಿದ್ದಾನೋ ಎಂದು ಗ್ರಹಿಸುವಷ್ಟು ಜಾಣ್ಮೆ ಇದೆ. ಆದರೆ ಇದು ಸೋಗಲಾಡಿ ಪತ್ರಕರ್ತರಿಗೆ ಮಾತ್ರ ಅರ್ಥವಾಗುತ್ತಿಲ್ಲ! ಇಂಥದ್ದೊಂದು ಸೋಗಲಾಡಿ ಬರಹಕ್ಕೆ ಸೂರ್ಯೋದಯ ಆಗುವುದನ್ನೇ ನಿರೀಕ್ಷಿಸಬೇಕಷ್ಟೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com