ಕೊರೋನಾ ವೈರಸ್ ತಗ್ಗುವ ತನಕ ಕಾಂಟ್ಯಾಕ್ಟ್ ಲೆನ್ಸ್ ಬಳಕೆ ಬೇಡ: ಡಾ.ಭುಜಂಗ ಶೆಟ್ಟಿ

ಬೆಂಗಳೂರು: ಕೋವಿಡ್-೧೯ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಖ್ಯಾತ ನೇತ್ರ ಹಾಗೂ ಆರೋಗ್ಯಸೇವಾ ತಜ್ಞ ಡಾ.ಕೆ.ಭುಜಂಗ ಶೆಟ್ಟಿ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಧರಿಸುವವರು ಸೋಂಕು ನಿವಾರಣೆಯಾಗುವ ತನಕ ಕನ್ನಡಕಗಳನ್ನು ಬಳಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಕೊರೋನಾವೈರಸ್ ತಡೆಗೆ ಮುಖದ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ, ಆದರೆ ಈ ವೈರಸ್ ಕಣ್ಣುಗಳಿಂದಲೂ ದೇಹ ಪ್ರವೇಶಿಸುತ್ತದೆ. ಆದರೆ ಕನ್ನಡಕಗಳನ್ನು ಧರಿಸುವುದರಿಂದ ಈ ವೈರಸ್ ಹರಡುವುದನ್ನು ತಡೆಯಲು ಸಾಧ್ಯ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಭುಜಂಗ ಶೆಟ್ಟಿ ಹೇಳುತ್ತಾರೆ.
ಜನರು ಕೊರೊನಾವೈರಸ್ ಸೋಂಕು ಬಾಯಿ ಮತ್ತು ಮೂಗಿನಿಂದ ದೇಹ ಪ್ರವೇಶಿಸಲಿದೆ. ಇದೇ ರೀತಿ ವೈರಸ್ ಕಣ್ಣುಗಳಿಂದಲೂ ಪ್ರವೇಶಿಸುವ ಸಾಧ್ಯತೆ ಇದೆ. ಒಂದು ದಿನಕ್ಕೆ ಮನುಷ್ಯರು ಅವರ ಮುಖ ಮತ್ತು ಕಣ್ಣುಗಳನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಕನಿಷ್ಠ ಹತ್ತಾರು ಬಾರಿ ಸ್ಪರ್ಶಿಸುತ್ತಾರೆ. ಇನ್ನು ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಬಳಸುವವರು ಅವರ ಕಣ್ಣುಗಳು ಹಾಗೂ ಮುಖವನ್ನು ಆಗಾಗ್ಗೆ ಮುಟ್ಟಿಕೊಳ್ಳುತ್ತಾರೆ. ಇದರಿಂದ ಸೋಂಕಿನ ರಿಸ್ಕ್ ಹೆಚ್ಚಾಗುತ್ತದೆ. ಆದ್ದರಿಂದ ಲೆನ್ಸ್ ಧರಿಸಿರುವವರು ಪರಿಸ್ಥಿತಿ ಸುಧಾರಿಸುವವರೆಗೆ ಕನ್ನಡಕಗಳನ್ನು ಬಳಸುವುದು ಸೂಕ್ತ ಎಂದು ಸಲಹೆ ಮಾಡಿದ್ದಾರೆ.
ಕನ್ನಡಕಗಳು ಕಣ್ಣುಗಳನ್ನು ಮಾಸ್ಕ್ಗಳಂತೆ ರಕ್ಷಿಸುತ್ತದೆ. ವೈರಸ್ ಹನಿಗಳು ನಿಮ್ಮ ಕಣ್ಣುಗಳ ಸಂಪರ್ಕಕ್ಕೆ ಬರದಂತೆ ತಡೆಯುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ನಾವು ಹೆಚ್ಚುವರಿ ರಕ್ಷಣೆಗಾಗಿ ಮನೆಯಿಂದ ಹೊರ ಹೋಗುವಾಗ ಕನ್ನಡಕಗಳನ್ನು ಧರಿಸುವುದು ಸೂಕ್ತ ಎನ್ನುತ್ತಾರೆ ಡಾ. ಭುಜಂಗಶೆಟ್ಟಿ. ಈ ವೈರಸ್ನಿಂದ ತೀವ್ರ ಬಾಧಿತವಾದ ಅಮೆರಿಕಾದಲ್ಲಿ ಅಲ್ಲಿನ ಅಕಾಡೆಮಿ ಆಫ್ ಆಪ್ತಲ್ಮಾಲಜಿಯ ಕಾಂಟ್ಯಾಕ್ಟ್ ಲೆನ್ಸ್ ಬಳಕೆದಾರರು ಕನ್ನಡಕ ಧರಿಸುವಂತೆ ಶಿಫಾರಸು ಮಾಡಿದ್ದಾರೆ. ಕಾಂಟ್ಯಾಕ್ಟ್ ಲೆನ್ಸ್ಗಳು ಕಿರಿಕಿರಿ ಮತ್ತು ತುರಿಕೆ ಉಂಟು ಮಾಡಿ ಮುಖವನ್ನು ಮುಟ್ಟುವಂತೆ ಮಾಡುತ್ತವೆ ಎಂದು ಹೇಳಿದ್ದಾರೆ.
ಚೆನ್ನಾಗಿ ಕಾಣಲು ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಬಳಸಬೇಕಿದ್ದರೆ ಅಂತಹವರು ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳಬೇಕು ಅಥವಾ ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು ಮತ್ತು ಮುಖ ಸ್ಪರ್ಶಿಸುವುದು, ಕಣ್ಣುಗಳನ್ನು ಉಜ್ಜುವುದನ್ನು ತಪ್ಪಿಸಬೇಕು ಎಂದಿದ್ದಾರೆ. ಕೊರೊನಾವೈರಸ್ ಸೋಂಕಿತ ಪ್ರದೇಶಗಳಾದ ಬಾಗಿಲ ಹಿಡಿಕೆ, ಕೀಗಳು, ಮೇಜುಗಳು ಮತ್ತು ಹೊರಗಿನ ವಸ್ತುಗಳನ್ನು ಮುಟ್ಟಿದ ನಂತರ ತಮ್ಮ ಮುಖ ಸ್ಪರ್ಶಿಸಿದಾಗ ವೈರಾಣು ಮಾನವ ದೇಹ ಪ್ರವೇಶಿಸುತ್ತದೆ. ಕನ್ನಡಕಗಳು ಕಣ್ಣುಗಳನ್ನು ಗಾಳಿಯಲ್ಲಿ ಹರಡುತ್ತಿರುವ ಯಾವುದೇ ವೈರಸ್, ಅಣುಗಳಿಂದ ರಕ್ಷಿಸುತ್ತದೆ. ಆರೋಗ್ಯ ಸೇವಾ ವೃತ್ತಿಪರರಿಗೆ ಮುಖ ಮುಚ್ಚುವ ಗಾಜುಗಳ ಬಳಕೆ ಕಡ್ಡಾಯವಾಗಿದೆ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


