ಎಕ್ತಾ ಕಪೂರ್ ಸ್ಟುಡಿಯೋದಲ್ಲಿ ಬೆಂಕಿ ಅವಘಡ

ಮುಂಬೈನ ಎಕ್ತಾ ಕಪೂರ್ ಮಾಲೀಕತ್ವದ ಕಿಲ್ಲಿಕ್ ನಿಕ್ಸೋನ್...
ಎಕ್ತಾ ಕಪೂರ್
ಎಕ್ತಾ ಕಪೂರ್

ಮುಂಬೈ: ಮುಂಬೈನ ಎಕ್ತಾ ಕಪೂರ್ ಮಾಲೀಕತ್ವದ ಕಿಲ್ಲಿಕ್ ನಿಕ್ಸೋನ್ ಸ್ಟುಡಿಯೋದಲ್ಲಿ ಶನಿವಾರ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ.

ಧಾರಾವಾಹಿಗಳ ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗುತ್ತಿದ್ದ ಎಕ್ತಾ ಕಪೂರ್ ಮಾಲೀಕತ್ವದ ಕಿಲ್ಲಿಕ್ ನಿಕ್ಸೋನ್ ಸ್ಟುಡಿಯೋದಲ್ಲಿ ಇಂದು ಅಗ್ನಿ ಅವಘಡ ಸಂಭವಿಸಿದ್ದು, ಸ್ಟುಡಿಯೋದಲ್ಲಿದ್ದ ಲಕ್ಷಾಂತರ ಮೌಲ್ಯದ ಉಪಕರಣಗಳು ನಾಶಗೊಂಡಿವೆ ಎಂದು ತಿಳಿದು ಬಂದಿದ್ದು, ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಖಾಸಗಿ ಚಾನೆಲ್ ಒಂದರ 'ಯೇ ಹೈ ಮೊಹಬ್ಬತೇ' ಎಂಬ ಧಾರಾವಾಹಿಯ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಭಯ ಭೀತರಾದ ಚಿತ್ರೀಕರಣದ ತಂಡ ಸ್ಟುಡಿಯೋದಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ 6 ಅಗ್ನಿ ಶಾಮಕ ವಾಹನ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com