ಅಪಹರಣಕ್ಕೂ ಮೊದಲೇ ಡಕಾಯಿತರ ಬಂಧನ..!

ಅಪಹರಣ ಮಾಡಲೆಂದು ಯೋಜನೆ ರೂಪಿಸಿ ಹೊರಟಿದ್ದವರನ್ನು...
ಅಪಹರಣಕ್ಕೂ ಮೊದಲೇ ಡಕಾಯಿತರ ಬಂಧನ..!
Updated on: 

ಬೆಂಗಳೂರು: ಅಪಹರಣ ಮಾಡಲೆಂದು ಯೋಜನೆ ರೂಪಿಸಿ ಹೊರಟಿದ್ದವರನ್ನು ಪೊಲೀಸರು ಸಂಪಂಗಿರಾಮ ನಗರದಲ್ಲಿ ಮಂಗಳವಾರ ಬಂಧಿಸಿದ್ದಾರೆ.

ರಿಚ್‌ಮಂಡ್ ಟೌನ್ ರಸ್ತೆಯಲ್ಲಿ ಹುಡುಗರ ಗುಂಪೊಂದು ಅನುಮಾನಾಸ್ಪದವಾಗಿ ಕಾರಿನಲ್ಲಿ ಹೋಗುತ್ತಿದ್ದಾಗ ಸ್ಥಳೀಯ ಪೊಲೀಸರು ಕಾರನ್ನು ನಿಲ್ಲಿಸಿದ್ದಾರೆ. ಈ ವೇಳೆ ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿ ಮಚ್ಚು, ಲಾಂಗು ಹಾಗೂ ಹಗ್ಗ ಪತ್ತೆಯಾಗಿದೆ. ವಿಚಾರಣೆಗೊಳಪಡಿಸಿದಾಗ ಅಪಹರಣದ ಪ್ರಮುಖ ರೂವಾರಿ ಕಾರ್ತಿಕ್ (25) ಎಂಬಾತ ಉದ್ಯಮಿ ಅಂಕಿತ್ ಜೈನ್ (25) ಎಂಬುವವರನ್ನು ಅಪಹರಿಸುವುದಕ್ಕೆ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.

ಸಂಚುಕಾರ ಕಾರ್ತಿಕ್ ಜೆಪಿ ನಗದದ ಆರ್‌ಬಿಐ ಲೇ ಔಟ್‌ನ ನಿವಾಸಿಯಾಗಿದ್ದು, ಈತ ಅಂಕಿತ್ ಕಂಪನಿಯಲ್ಲಿ ಸಹಾಯಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಅಂಕಿತ್‌ನ ಅದ್ದೂರಿ ಜೀವನ ಶೈಲಿಯನ್ನು  ಕಂಡು ಹಣದಾಸೆಗೆ ಬಿದ್ದ ಈತ, ಅಂಕಿತ್‌ನನ್ನು ಅಪಹರಿಸಿ 1 ಕೋಟಿ ಹಣ ಬೇಡಿಕೆ ಇಡಬೇಕೆಂದು ತೀರ್ಮಾನಿಸಿ ಅಪಹರಣಕ್ಕೆ ಯೋಜನೆ ರೂಪಿಸಿದ್ದಾನೆ.

ಯೋಜನೆಯಂತೆ ಅಪಹರಣಕ್ಕಾಗಿ ಕಾರ್ತಿಕ್ ತನ್ನ ಸ್ನೇಹಿತರಾದ ಕುಮಾರಸ್ವಾಮಿ ಲೇಜೌಟ್‌ನ ಮಂಜುನಾಥ್ (28) ಲತೇಶ್ (23), ಜಯನಗರದ ಸುನಿಲ್ (22), ಸಿಂಗಸಂದ್ರದ ಪ್ರವೀಣ್ ಕುಮಾರ್ ಎಂಬುವವರನ್ನು ಬಳಸಿಕೊಂಡಿದ್ದಾನೆ.

ಲತೇಶ್ ಎಂಬಾತ ಸ್ವಯಂ ಉದ್ಯೋಗ ಮಾಡಿಕೊಂಡಿದ್ದು, ಕಾರ್ತಿಕ್ ದುಡ್ಡು ಕೊಡುವ ಆಸೆ ತೋರಿಸಿ ಅಪಹರಣಕ್ಕೆ ಕೈ ಜೋಡಿಸುವಂತೆ ಬೇಡಿಕೆ ಇಟ್ಟಿದ್ದಾನೆ. ಹಣದಾಸೆಗೆ ಈ ಬೇಡಿಕೆಯನ್ನು ಒಪ್ಪಿಕೊಂಡ ಈತ, ಅಪಹರಣವನ್ನೇ ಹವ್ಯಾಸವನ್ನಾಗಿರಿಸಿಕೊಂಡಿದ್ದ ಮಂಜುನಾಥ್ ಹಾಗೂ ಸುನಿಲ್ ಎಂಬಾತನನ್ನು ಕಾರ್ತಿಕ್‌ಗೆ ಪರಿಚಯಿಸಿದ್ದಾನೆ. ನಂತರ ಎಲ್ಲರೂ ಸೇರಿ ಅಂಕಿತ್ ಜೈನ್ ಅಪಹರಣಕ್ಕೆ ಸಂಚು ರೂಪಿಸಿದ್ದಾರೆ.

ಅಪಹರಣಕಾರರು ಈ ಮೊದಲು ಅಂಕಿತ್ ಜೈನ್ ಕಾರಿನಲ್ಲಿ ಹೋಗುತ್ತಿದ್ದಾಗ, ಕಾರನ್ನು ನಿಲ್ಲಿಸಿ ಜೈನ್‌ರನ್ನು ಅಪಹರಿಸಲು ಯತ್ನಿಸಿದ್ದಾರೆ ಆದರೆ ಅಂಕಿತ್ ಜೈನ್ ಅವರ ಕಾರು ಚಾಲಕನ ಸಮಯ ಪ್ರಜ್ಞೆಯಿಂದಾಗಿ ಅಪಹರಣದಿಂದ ಪಾರಾಗುವಂತಾಗಿತ್ತು. ಈ ಘಟನೆಯ ನಂತರ ಜೈನ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com