ಚಲನಚಿತ್ರ ಮಂಡಳಿ ಚುನಾವಣೆಗೆ ಅಸ್ತು

ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷ ಸೇರಿ...
ಹೈ ಕೋರ್ಟ್
ಹೈ ಕೋರ್ಟ್
Updated on: 

ಬೆಂಗಳೂರು: ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷ ಸೇರಿ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸಲು ಹೈ ಕೋರ್ಟ್ ಹಸಿರು ನಿಶಾನೆ ತೋರಿದೆ. ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಡಿ.13ರಂದು ಹಮ್ಮಿಕೊಂಡಿದ್ದ ಚುನಾವಣೆಗೆ ತಡೆ ನೀಡುವಂತೆ ಕೋರಿ ಕೃಷ್ಣೇಗೌಡ ಎಂಬುವರು ಹೈ ಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಅಬ್ದುಲ್ ನಜೀರ್ ಅವರ ಪೀಠ, ಚುನಾವಣೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ದಿನಾಂಕವೂ ಪ್ರಕಟವಾಗಿದೆ. ಈ ಹಂತದಲ್ಲಿ ಚುನಾವಣೆಗೆ ತಡೆ ನೀಡುವುದು ಸರಿಯಲ್ಲ. ಆದ್ದರಿಂದ ಚುನಾವಣೆ ಮುಂದುವರಿಸಿ, ಅದರ ಫಲಿತಾಂಶ ಅಂತಿಮ ಆದೇಶಕ್ಕೆ ಬದ್ಧವಾಗಿರಬೇಕು ಎಂದು ಏಕಸದಸ್ಯ ಪೀಠ ಇದೇ ವೇಳೆ ಆದೇಶಿಸಿದೆ.

ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಪೂರ್ವ ಪ್ರಕಟಿಸಲಾಗಿರುವ ಮತದಾರರ ಪಟ್ಟಿ ಸರಿಯಿಲ್ಲ ಎಂದು ಕೆಲವರು ಜಿಲ್ಲಾ ಸಹಕಾರ ಸಂಘದ ನೋಂದಣಾಧಿಕಾರಿಗೆ ದೂರು ಸಲ್ಲಿಸಿದ್ದರು. ದೂರನ್ನು ಪರಿಗಣಿಸ್ದದ ನೋಂದಣಾಧಿಕಾರಿ, ವಾಣಿಜ್ಯ ಮಂಡಳಿಗೆ ದೋಷ ಸರಿಪಡಿಸಿ ನಂತರ ಚುನಾವಣೆ ನಡೆಸಲು ಸೂಚಿಸಿದ್ದರು. ಆದರೆ, ವಾಣಿಜ್ಯ ಮಂಡಳಿ ಈ ದೋಷವನ್ನು ಬಗೆಹರಿಸಿರಲಿಲ್ಲ. ಆ ಮಧ್ಯೆ ಚುನಾವಣಾಧಿಕಾರಿ ಚುನಾವಣೆ ಮುಂದೂಡಿಕೆಗೆ ಒಪ್ಪದೇ, ಚುನಾವಣೆ ದಿನಾಂಕ ಪ್ರಕಟಿಸಿದ್ದರು.

ಲೋಪದೋಷ ಸರಿಪಡಿಸದೆ ಚುನಾವಣೆಗೆ ಮುಂದಾಗಿರುವ ಚುನಾವಣಾಧಿಕಾರಿಗಳ ಕ್ರಮಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೃಷ್ಣೇಗೌಡ ಎಂಬುವರು ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ದಾಖಲಿಸಿದ್ದರು.

ವಿವಾದವೇನು:? ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಲೋಪದೋಷಗಳಿದ್ದವು. ಇದನ್ನು ರದ್ದುಗೊಳಿಸಬೇಕೆಂದು ಕೋರಿ ಕೃಷ್ಣೇಗೌಡ ಅವರು ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ದೂರು ನೀಡಿದ್ದರು.

ಇದನ್ನು ಪರಿಶೀಲಿಸಿದ್ದ ರಿಜಿಸ್ಚ್ರಾರ್ ತಪ್ಪುಗಳನನು ಸರಿಪಡಿಸುವಂತೆ ಮಂಡಳಿಗೆ ಸೂಚಿಸಿದ್ದರು. ಈ ಸೂಚನೆಯನ್ನು ದೂರುದಾರರು ಚುನಾವಣಾಧಿಕಾರಿ ಹಾಗೂ ಮಂಡಳಿಯ ಅಧ್ಯಕ್ಷರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದನ್ನು ಪ್ರಶ್ನಿಸಿ ದೂರುದಾರರು ಮರು ದೂರು ಸಲ್ಲಿಸಿದ್ದರು.

ನಂತರ ನೋಂದಣಾಧಿಕಾರಿಗಳು ತಪ್ಪುಗಳನ್ನು ಸರಿಪಡಿಸಿದ ನಂತರವೇ ಚುನಾವಣೆ ನಡೆಸುವಂತೆ ಸೂಚಿಸಿತ್ತು. ಈ ನಡುವೆ, ಚುನಾವಣೆಯನ್ನು ಸದ್ಯದ ಮಟ್ಟಿಗೆ ತಡೆಹಿಡಿಯಲಾಗಿದೆ ಎಂದು ಮಂಡಳಿ ನಿರ್ಣಯ ಹೊರಡಿಸಿತ್ತು. ಆದರೆ, ಇದಕ್ಕೊಪ್ಪದ ಚುನಾವಣಾಧಿಕಾರಿಗಳು, ಈಗಾಗಲೇ ಚುನಾವಣಾ ವೇಳಾ ಪಟ್ಟಿ ಪ್ರಕಟವಾಗಿರುವುದರಿಂದ ಚುನಾವಣೆ ನಡೆಯಲೇಬೇಕು ಎಂದು ಪ್ರತಿಪಾದಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com