ವಾಟ್ಸ್‌ಆ್ಯಪ್ ಡೈವೋರ್ಸ್

ಅಲ್ಲ ಕನಾ ಮಂಕ, ಈ ಹೆಂಡ್ತೀರಿಗೆ ಡೈವೋರ್ಸ್ ಕೊಡಾಕೆ ಗಂಡ್ ಮುಂಡೈವ್‌ಕೆ...
ವಾಟ್ಸ್‌ಆ್ಯಪ್‌
ವಾಟ್ಸ್‌ಆ್ಯಪ್‌

ದುಬೈ: ಅಲ್ಲ ಕನಾ ಮಂಕ, ಈ ಹೆಂಡ್ತೀರಿಗೆ ಡೈವೋರ್ಸ್ ಕೊಡಾಕೆ ಗಂಡ್ ಮುಂಡೈವ್‌ಕೆ ಏನೇನು ಕಾರಣ ಸಿಗ್ತೈತಪ್ಪೋ? ಯಾಕ್ ಎಂಕಣ್ಣೋ ಏನಾತು?

ಹೂ ಕಂಡ್ಲಾ, ದುಬೈಲಿ ಒಬ್ಬ ವಾಟ್ಸ್‌ಆ್ಯಪ್‌ನಾಗ ಅವ ಕಳ್ಸಿದ್ ಮೆಸೇಜ್‌ನ ನೋಡಿದ್ರೂ ಹೆಂಡ್ತಿ ಕ್ಯಾರೇ ಅಂದಿಲ್ಲ. ರಿಪ್ಲೇನೂ ಮಾಡ್ಲಿಲ್ಲ ಅಂತ ಫುಲ್ ಮುಖ ಊದುಸ್ಕಂಡು ಡೈವರ್ಸ್‌ನೇ ಕೊಟ್ಯಾನಂತೆ ಕನ್ಲಾ.

ಅಯ್ಯೋ ದೇವ್ರೆ ಇದ್ಯಾವ ಕಾಲ ಬಂದು ಅಂತೀನಿ. ಆ ಯಮ್ಮ ಮಾಡಿದ್ದೂ ಹಂಗೆ ಐತಂತ್ಲಾ, ಯಾವಾಗ್ ನೋಡಿದ್ರೂ ಕೈಲಿ ಮೊಬೈಲ್ ಸಿಕ್ಸಂಡೇ ಇರ್ತೈತಂತೆ. ಗಂಡಂಗೆ ಒಬ್ನಿಗೆ ಬಿಟ್ಟು ಉಳಿದೋರ್ಗೆಲ್ಲ ಮೆಸೇಜ್ ಮಾಡ್ತಿತ್ತಂತೆ. ಹ್ಹೋ.... ಹಂಗಾರೆ ಯಾವ ಗಂಡ್ಸಾರು ತಡ್ಕಂಡ್ಯಾನು ಬಿಡಣ್ಣೋ ಹೂ ಮುಂದ್ ಕೇಳು, ಆದ್ರೂ ಸುಮ್ಕಿದ್ನಂತ, ಆದ್ರೆ ಇವ ವಾಟ್ಸ್ ಆ್ಯಪ್‌ನಾಗ ಮೆಸೇಜ್ ಕಳ್ಸೀರೆ ನೋಡಿದ್ರೂ ಸುಮ್ಕೆ ಇದ್ದಿದ್ಕೆ ಮೈ ಉರ್ಕಂಡು ಹಿಂಗೆ ಮಾಡ್ಯಾನಂತ ನೋಡು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com