ಬಿಗ್ ಬಾಸ್‌ಗೆ ಬರಲ್ಲ ಕಿಮ್ ಕರ್ದಾಶಿಯನ್?

ಅಮೆರಿಕದ ಜನಪ್ರಿಯ ಕಿರುತೆರೆ ತಾರೆ ಕಿಮ್ ಕರ್ದಾಶಿಯನ್ ಬಿಗ್ ಬಾಸ್ ಎಂಟನೇ...
ಕಿಮ್ ಕರ್ದಾಶಿಯನ್
ಕಿಮ್ ಕರ್ದಾಶಿಯನ್

ನವದೆಹಲಿ: ಅಮೆರಿಕದ ಜನಪ್ರಿಯ ಕಿರುತೆರೆ ತಾರೆ ಕಿಮ್ ಕರ್ದಾಶಿಯನ್ ಬಿಗ್ ಬಾಸ್ ಎಂಟನೇ ಆವೃತ್ತಿಯಲ್ಲಿ ಭಾಗವಹಿಸುತ್ತಿಲ್ಲವಂತೆ.

ಈ ಸುದ್ದಿ ಹೊರಬೀಳುತ್ತಿದ್ದಂತೆ ಭಾರತದಲ್ಲಿ ಅವರ ಅಭಿಮಾನಿಗಳಿಗೆ ಭಾರಿ ನಿರಾಶೆಯಾಗಿದೆ.
ಕೊನೆಯ ಕ್ಷಣದಲ್ಲಿ ಕಿಮ್ ಕರ್ದಾಶಿಯನ್ ಅವರ ಪ್ರಯಾಣ ರದ್ದಾಗಿದ್ದರಿಂದ ಅವರು ಬಿಗ್ ಬಾಸ್‌ನಲ್ಲಿ ಭಾಗವಹಿಸುತ್ತಿಲ್ಲ.

ಇಷ್ಟು ಮಾತ್ರವಲ್ಲದೆ ಆಸ್ಟ್ರೇಲಿಯಾದಲ್ಲಿ ಅವರು ರಾಯಭಾರಿಯಾಗಿರುವ ಸುಗಂಧ ದ್ರವ್ಯದ ಜಾಹೀರಾತಿವ ಚಿತ್ರೀಕರಣದಲ್ಲಿದ್ದಾರೆ. ಹೀಗಾಗಿಯೂ ಅವರು ಶೋನಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಲಾಗಿದೆ.

ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮವನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com