

ವಾಷಿಂಗ್‌ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸಂಪುಟಕ್ಕೆ ಮೊದಲ ಆಘಾತ ಬಂದೊದಗಿದೆ. ರಕ್ಷಣಾ ಸಚಿವ ಮತ್ತು ರಿಪಬ್ಲಿಕನ್ ಪಕ್ಷದ ಏಕೈಕ ಸದಸ್ಯ ಚಕ್ ಹೇಗಲ್ ರಾಜಿನಾಮೆ ನೀಡಿದ್ದಾರೆ.
ಅಮೆರಿಕದ ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಪಕ್ಷ ಬಹುಮತ ಘಟನೆ ಇಸಿಸ್ ವಿರುದ್ಧದ ಕಾರ್ಯಾಚರಣೆಯಲ್ಲಿ ನಿರೀಕ್ಷಿತ ಗೆಲುವು ಲಭಿಸದೆ ಇರುವ ನಡುವೆ ಹೆಗಲ್ ಪದತ್ಯಾಗ ಮಾಡಿದ್ದು ಅಚ್ಚರಿ ತಂದಿದೆ. ಅಧ್ಯಕ್ಷ ಒಬಾಮ ತಂಡದಲ್ಲಿ ಹೇಗಲ್ 3ನೇ ಪ್ರಭಾವಿ ವ್ಯಕ್ತಿಯಾಗಿದ್ದರು. ಪದ ತ್ಯಾಗದ ಬಗ್ಗೆ ಕಳೆದ ಕೆಲ ವಾರಗಳಿಂದ ಚರ್ಚೆ ನಡೆಯುತ್ತಿತ್ತು.
ಗಮನಾರ್ಹ ಅಂಶವೆಂದರೆ ಹೇಗಲ್ ಭಾರತದ ರಕ್ಷಣಾ ಸಚಿವ ಪರಿಕ್ಕರ್‌ನ್ನು ಮುಂದಿನ ವಾರ ಭೇಟಿಯಾಗುವ ಕಾರ್ಯಕ್ರಮವಿತ್ತು. ಮೋದಿ ಸರ್ಕಾರ 100 ದಿನ ಪೂರ್ತಿಗೊಳಿಸಿದ ವೇಳೆ ಭಾರತಕ್ಕೆ ಭೇಟಿ ನೀಡಿದ್ದ ಮೂವರು ಪ್ರಮುಖರಲ್ಲಿ ಹೇಗಲ್ ಒಬ್ಬರಾಗಿದ್ದರು.