ಬೆಲ್ಟ್ ಬಿಚ್ಚಿ ಬಾರಿಸಿದ ಸಹೋದರಿಯರಿಗೆ ಸರ್ಕಾರದಿಂದ ಸನ್ಮಾನ

ಚಲಿಸುವ ಬಸ್‌ನಲ್ಲಿ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ ಪೋಕರಿಗೆಳಿಗೆ ಬೆಲ್ಟ್ ಬಿಚ್ಚಿ ಬಾರಿಸಿದ ರೋಹತಕ್ ಸಹೋದರಿ...
ಹರ್ಯಾಣದ ಸರ್ಕಾರಿ ಬಸ್‌ನಲ್ಲಿ ಪೋಕರಿಗಳ ಅಸಭ್ಯ ವರ್ತನೆ
ಹರ್ಯಾಣದ ಸರ್ಕಾರಿ ಬಸ್‌ನಲ್ಲಿ ಪೋಕರಿಗಳ ಅಸಭ್ಯ ವರ್ತನೆ
Updated on: 

ಚಂಡೀಗಢ: ಚಲಿಸುವ ಬಸ್‌ನಲ್ಲಿ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ ಪೋಕರಿಗೆಳಿಗೆ ಬೆಲ್ಟ್ ಬಿಚ್ಚಿ ಬಾರಿಸಿದ ರೋಹತಕ್ ಸಹೋದರಿಯರಿಗೆ ಸನ್ಮಾನ ಮಾಡುವುದಾಗಿ ಹರ್ಯಾಣ ಸರ್ಕಾರ ಸೋಮವಾರ ಘೋಷಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು, ದಿಟ್ಟ ಯುವತರಿಯರಿಗೆ ಗಣರಾಜ್ಯೋತ್ಸವ ದಿನದಂದು ರಾಜ್ಯ ಸರ್ಕಾರದಿಂದ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಈ ಪ್ರಕರಣ ಇತರರಿಗೆ ಮಾದರಿಯಾಗಲಿದ್ದು, ಇಂಥಹ ದಿಟ್ಟ ಮಹಿಳೆಯರಿಂದ ಸಮಾಜ ಬದಲಾಗಲಿದೆ. ವಿಕೃತ ಮನಸಿನವರಿಗೆ ಇದೊಂದು ಎಚ್ಚರಿಕೆ ಗಂಟೆ ಎಂದು ಹೇಳಿದ್ದಾರೆ.

ಯುವತಿಯರ ಧೈರ್ಯವನ್ನು ಮೆಚ್ಚಬೇಕು ಎಂದಿರುವ ಹರ್ಯಾಣ ಸಿಎಂ, ಇಬ್ಬರು ಸಹೋದರಿಯರ ಹೆಸರನ್ನು ಶೌರ್ಯ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ ಮತ್ತು ಮಹಿಳಾ ಪ್ರಯಾಣಿಕರ ರಕ್ಷಣೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಈ ಮಧ್ಯೆ, ಯುವತಿಯರನ್ನು ಕೀಚಾಯಿಸಿದ್ದ ಪೋಕರಿಗಳನ್ನು ಪೊಲೀಸರು ಇಂದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮೂವರು ಆರೋಪಿಗಳನ್ನು ಡಿಸೆಂಬರ್ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಘಟನೆಯ ವಿವರ: ಕಾಲೇಜಿಗೆಂದು ತಮ್ಮ ಹಳ್ಳಿಯಿಂದ ರೋಹ್‌ತಕ್‌ಗೆ ಸರ್ಕಾರಿ ಬಸ್‌ನಲ್ಲಿ ತೆರಳುತ್ತಿದ್ದ ಸಹೋದರಿಯರನ್ನು ಮೂವರು ಯುವಕರು ಚುಡಾಯಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಒಬ್ಬಾತ ಯುವತಿಯರು ಎನ್ನುವುದನ್ನೂ ನೋಡದೆ ಹಲ್ಲೆ ನಡೆಸಿದ್ದಾನೆ.

ಈ ವೇಳೆ ಬಸ್‌ನಲ್ಲಿ ಇದ್ದ ಯಾರೊಬ್ಬರೂ ನೆರವಿಗೆ ಬಾರಲಿಲ್ಲ. ಆಗ ಈ ಯುವತಿಯರೇ ಪೋಕರಿಗಳಿಗೆ ಸರಿಯಾದ ಪಾಠ ಕಲಿಸಲು ನಿರ್ಧರಿಸಿದರು. ಸಹೋದರಿಯರಲ್ಲಿ ಒಬ್ಬಾಕೆ ತನ್ನ ಬೆಲ್ಟ್ ಬಿಚ್ಚಿ ಮೂವರಿಗೂ ಮನಸೋ ಇಚ್ಛೆ ಬಾರಿಸಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com