ಮೋದಿ ಭೂಚಕ್ರ

ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಇದುವೇ ನನ್ನ ಮಂತ್ರ ಎಂದು ಪುನರುಚ್ಚರಿಸಿದ್ದಾರೆ ಪ್ರಧಾನಿ ಮೋದಿ....
ಬೆಂಗಳೂರಿನಲ್ಲಿ ನರೇಂದ್ರ ಮೋದಿ (ಕೃಪೆ: ಕೆಸಿಎನ್)
ಬೆಂಗಳೂರಿನಲ್ಲಿ ನರೇಂದ್ರ ಮೋದಿ (ಕೃಪೆ: ಕೆಸಿಎನ್)
Updated on: 

ಬೆಂಗಳೂರು: ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಇದುವೇ ನನ್ನ ಮಂತ್ರ ಎಂದು ಪುನರುಚ್ಚರಿಸಿದ್ದಾರೆ ಪ್ರಧಾನಿ ಮೋದಿ. ತಮ್ಮ ಸರ್ಕಾರಕ್ಕೆ ತಲೆನೋವಾಗಿದ್ದ ಭೂಸ್ವಾಧೀನ ಮಸೂದೆ ಟೀಕಾಕಾರರಿಗೆ ಪ್ರಬಲ ತಿರುಗೇಟು ನೀಡಿದ್ದಾರೆ. ಮಾತ್ರವಲ್ಲ, ಕೃಷಿಕರ ಪರವಾಗಿಯೇ  ನಮ್ಮ ಸರ್ಕಾರವಿದೆ ಎಂದು ಪ್ರಬಲವಾಗಿ ಸಮರ್ಥಿಸಿಕೊಂಡರು. ಇಷ್ಟು ವರ್ಷ ಆಳಿದವರು ಏನು ಮಾಡಿದ್ದಾರೆ ಅನ್ನುವುದಕ್ಕಿಂತ ನಾವು ಕೃಷಿಗೆ ಹೆಚ್ಚು ಒತ್ತು ನೀಡಿದ್ದೇನೆ. ಕೃಷಿ ಅಭಿವೃದ್ಧಿಯನ್ನು ಮೂರು ಭಾಗ ಮಾಡಿಕೊಂಡು ಯೋಜನೆಯನ್ನು ರೂಪಿಸಿದ್ದೇನೆ
ಎಂದು ಮೋದಿ ಕೃಷಿ ನೀತಿಯನ್ನು ತೆರೆದಿಟ್ಟರು. ಗ್ರಾಮಗಳಲ್ಲಿ ರೈತರು ತಮ್ಮ ಮಕ್ಕಳಿಗೆ ಚಪರಾಸಿ ಕೆಲಸ ಕೊಡಿಸಲು ಲಂಚಕೊಡಲು ಜಮೀನು ಮಾರುತ್ತಿದ್ದರು. ಈಗ
ಆ ಜಮೀನುಗಳು ಎಲ್ಲಿ ಹೋದವು, ಯಾರ ಬಳಿ ಇವೆ ಎಂದು ಎಲ್ಲರಿಗೂ ಗೊತ್ತು. ಆದರೆ ನಮ್ಮ ಸರ್ಕಾರ ಗ್ರಾಮಗಳಲ್ಲೇ ರೈತರು ಉಳಿಯಲು ಕೃಷಿ ಯೋಜನೆ ಮಾಡಿದ್ದೇವೆ. ಅಲ್ಲಿಯೇ ಬೆಳೆದು ಮೌಲ್ಯ ಪಡೆಯಲು ನೆರವು ನೀಡುತ್ತೇವೆ. ಈಗ ಹೇಳಿ ಯಾವ ಸರ್ಕಾರ ರೈತರ ವಿರೋಧಿ ಎಂದು ಪ್ರಶ್ನಿಸಿ, ವಿರೋಧಪಕ್ಷಗಳಿಗೆ ತಿರುಗೇಟು ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com