ಅಸ್ಸಾಂನಲ್ಲಿ ಗ್ರೆನೇಡ್ ಸ್ಫೋಟ: 1 ಸಾವು, ಮೂವರಿಗೆ ಗಂಭೀರ ಗಾಯ

ಅಸ್ಸಾಂನ ರೌಟಾ ಮಾರ್ಕೆಟ್ ಪ್ರದೇಶದಲ್ಲಿ ಗ್ರೆನೇಡ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ..
ಗ್ರೆನೇಡ್ ಸ್ಫೋಟಗೊಂಡ ಪ್ರದೇಶ
ಗ್ರೆನೇಡ್ ಸ್ಫೋಟಗೊಂಡ ಪ್ರದೇಶ

ಉದಲ್ ಗುರಿ: ಗ್ರೆನೇಡ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿದ ಘಟನೆ ಭಾನುವಾರ ಬೆಳಗ್ಗೆ ಅಸ್ಸಾಂನಲ್ಲಿ ನಡೆದಿದೆ.

ಅಸ್ಸಾಂನ ರೌಟಾ ಮಾರ್ಕೆಟ್ ಪ್ರದೇಶದಲ್ಲಿ ಗ್ರೆನೇಡ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತ ವ್ಯಕ್ತಿಯನ್ನು ರಾಮಚಂದ್ರ ಬರ್ಮನ್ ಎಂದು ಗುರಿತಿಸಲಾಗಿದ್ದು, ಈತ ಸ್ಥಳೀಯ ಸ್ಕ್ರ್ಯಾಪ್ ಡೀಲರ್ ಆಗಿದ್ದನು ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಧಾವಿಸಿದ್ದು, ಗ್ರೆನೇಡ್ ಸ್ಫೋಟಗೊಳ್ಳಲು ಕಾರಣವೇನು ಮತ್ತು ಈ ಗ್ರೆನೇಡ್ ಅನ್ನು ತಂದಿದ್ದು ಯಾರು ಎಂಬಿತ್ಯಾದಿ ವಿಚಾರಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com