ಒಬಾಮ ಜನಪ್ರಿಯತೆಯಷ್ಟೇ ಅಲ್ಲ, ಆದಾಯವೂ ಕುಸಿತ!

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಜನಪ್ರಿಯತೆ ಮಾತ್ರವಲ್ಲ ಅವರ ಆದಾಯವೂ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ...
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ (ಸಂಗ್ರಹ ಚಿತ್ರ)
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ (ಸಂಗ್ರಹ ಚಿತ್ರ)

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಜನಪ್ರಿಯತೆ ಮಾತ್ರವಲ್ಲ ಅವರ ಆದಾಯವೂ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.

ಒಬಾಮ ಹಾಗೂ ಪತ್ನಿ ಮಿಶೆಲ್ ಆದಾಯ ಕುಸಿಯುತ್ತಿದೆ. ವೈಟ್‍ಹೌಸ್‍ಗೆ ದಂಪತಿ ಸಲ್ಲಿಸಿದ ತೆರಿಗೆ ರಿಟರ್ನ್ಸ್ ಪ್ರಕಾರ ಅವರ ಕಳೆದ ವರ್ಷದ ಆದಾಯ ರು.2.97 ಕೋಟಿ! 2013ರಲ್ಲಿ ಇದು ರು.3.13 ಕೋಟಿಯಷ್ಟಿತ್ತು. 2012ರಲ್ಲಿ ಅವರ ಆದಾಯ ರು.4.12 ಕೋಟಿಯಾಗಿತ್ತು. ಅಧ್ಯಕ್ಷರಾಗಿ ಒಬಾಮ ಅವರಿಗೆ ವಾರ್ಷಿಕ ರು.2.49 ಕೋಟಿ ವೇತನ ಸಿಗುತ್ತಿದೆ. ಇನ್ನು ಆತ್ಮಚರಿತ್ರೆ ಮಾರಾಟದಿಂದಲೂ ಅವರಿಗೆ ಒಂದಷ್ಟು ಹಣ ಸಿಗುತ್ತಿದೆ. ಆದರೆ, ಆತ್ಮಚರಿತ್ರೆ ಮಾರಾಟ ಈಗ ಕುಸಿದಿದೆ. ಇನ್ನು ವಿದೇಶದಿಂದ ಅವರು ರು.27.22 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಇನ್ನು ಅಧ್ಯಕ್ಷರಾಗಿ ಅವರು ವಿವಿಧ ಸಂಘಟನೆಗಳಿಗೆ ರು.44.03 ಲಕ್ಷದಷ್ಟು ದೇಣಿಗೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com