ಮುಂಬೈನಲ್ಲಿ ಉಗ್ರರ ದಾಳಿ ಸಾಧ್ಯತೆ: ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ

ರಾಷ್ಟ್ರದ ಜನನಿಬಿಡ ಪ್ರದೇಶ ಮುಂಬೈ ಮೇಲೆ ಲಷ್ಕರ್ ಇ ತೊಯ್ಬಾ ಉಗ್ರರು ಭಾರೀ ಪ್ರಮಾಣದಲ್ಲಿ ದಾಳಿ ಮಾಡುವ ಸಂಭವವಿದೆ ಎಂದು ಮುಂಬೈ ಪೊಲೀಸರಿಗೆ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ಸಂದೇಶವನ್ನು ನೀಡಿದೆ...
ಮುಂಬೈನಲ್ಲಿ ಉಗ್ರರ ದಾಳಿ ಸಾಧ್ಯತೆ: ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ
ಮುಂಬೈನಲ್ಲಿ ಉಗ್ರರ ದಾಳಿ ಸಾಧ್ಯತೆ: ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ
Updated on: 

ನವದೆಹಲಿ: ರಾಷ್ಟ್ರದ ಜನನಿಬಿಡ ಪ್ರದೇಶ ಮುಂಬೈ ಮೇಲೆ ಲಷ್ಕರ್ ಇ ತೊಯ್ಬಾ ಉಗ್ರರು ಭಾರೀ ಪ್ರಮಾಣದಲ್ಲಿ ದಾಳಿ ಮಾಡುವ ಸಂಭವವಿದೆ ಎಂದು ಮುಂಬೈ ಪೊಲೀಸರಿಗೆ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ಸಂದೇಶವನ್ನು ನೀಡಿದೆ.

ಈ ಕುರಿತಂತೆ ಮುಂಬೈ ಪೊಲೀಸರಿಗೆ ಕೇಂದ್ರ ಗುಪ್ತಚರ ಇಲಾಖೆಯ ಪತ್ರ ಬರೆದಿದ್ದು, ಪತ್ರದಲ್ಲಿ 2008ರ ಮುಂಬೈ ದಾಳಿ ಪ್ರಕರಣ ಪ್ರಮುಖ ರುವಾರಿ ಝಕಿಉರ್ ರೆಹಮಾನ್ ಲಖ್ವಿ ಜೈಲಿನಿಂದ ಬಿಡುಗಡೆ ಹೊಂದಿರುವ ಹಿನ್ನೆಲೆಯಲ್ಲಿ ಮುಂಬೈ ಮೇಲೆ ಉಗ್ರರಿಂದ ದೊಡ್ಡ ಮಟ್ಟದಲ್ಲಿ ದಾಳಿಯಾಗುವ ಸಂಭವವಿದೆ.

ಮುಂಬೈನ ಎಲ್ಲಾ ಪ್ರದೇಶಗಳ ಮೇಲೆ ಕಣ್ಣಿಟ್ಟಿರುವ ಲಷ್ಕರ್ ಇ ತೊಯ್ಬಾ ಸಂಘಟನೆಯು ದಾಳಿ ಮಾಡಲು ಸುಮಾರು 8-10 ಭಯೋತ್ಪಾದಕರನ್ನು ಕಳುಹಿಸಿದ್ದು, ಸಮುದ್ರ ಮಾರ್ಗದಿಂದ ಮುಂಬೈ ತಲುಪಲು ಯೋಜನೆ ರೂಪಿಸಿದ್ದಾರೆ. ದಾಳಿ ವೇಳೆ ಉಗ್ರರು ಹೋಟೆಲ್, ರೈಲ್ವೆ ನಿಲ್ದಾಣ ಹಾಗೂ ದೇಶದ ಆರ್ಥಿಕತೆ ಉನ್ನತ ಕೇಂದ್ರಗಳನ್ನೇ ಪ್ರಮುಖ ಗುರಿಯಾಗಿಟ್ಟುಕೊಂಡಿದ್ದಾರೆ ಎಂದು ಗುಪ್ತಚರ ಎಚ್ಚರಿಕೆ ನೀಡಿದೆ.

ಗುಪ್ತಚರ ಇಲಾಖೆ ಎಚ್ಚರಿಕೆ ಸಂದೇಶ ಹಿನ್ನೆಲೆಯಲ್ಲಿ ಎಚ್ಚರವಹಿಸಿರುವ ಮುಂಬೈ ಪೊಲೀಸರು, ಮುಂಬೈನ ಎಲ್ಲಾ  ಸೂಕ್ಷ್ಮ ಪ್ರದೇಶಗಳಲ್ಲಿಯೂ ಭಾರೀ ಕಟ್ಟೆಚ್ಚರ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com