

ಬೆಂಗಳೂರು: ಭೀಕರ ಭೂಕಂಪದಿಂದಾಗಿ ತತ್ತರಿಸಿರುವ ನೇಪಾಳಕ್ಕೆ ಭಾರತದಿಂದ ವಿಮಾನದ ಮೂಲಕ ಔಷಧಿ ಹಾಗೂ ಆಹಾರವನ್ನು ಪೂರೈಕೆ ಮಾಡಲಾಗುತ್ತಿದೆ.
ರಕ್ಷಣಾ ಕಾರ್ಯಾಚರಣೆಗಾಗಿ ನೆರವು ನೀಡುವಂತೆ ನೇಪಾಳ ಸರ್ಕಾರದಿಂದ ಬಂದ ಮನವಿಗೆ ಸ್ಪಂದನೆ ನೀಡಿರುವ ಭಾರತ ಸರ್ಕಾರ 10 ಎನ್ ಡಿಆರ್ಎಫ್ ತಂಡಗಳ ಕಾರ್ಯಕರ್ತರನ್ನೊಳಗೊಂಡ ಭಾರತೀಯ ವಾಯುಪಡೆಯ 4 ವಿಮಾನಗಳನ್ನು ಕಠ್ಮಂಡುವಿಗೆ ಕಳುಹಿಸಿಕೊಟ್ಟಿದೆ.
ಇದೇ ವೇಳೆ ಭಾರತ ಹಾಗೂ ನೇಪಾಳದಲ್ಲಿ ಸಂಭವಿಸಿರುವ ಭೂಕಂಪದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತುರ್ತುಸಭೆ ಕರೆದಿದ್ದು, ನೇಪಾಳಕ್ಕೆ ಅಗತ್ಯ ನೆರವು ನೀಡುವಂತೆ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.