ಸಂಸತ್‌ನಲ್ಲಿ ಕಾಂಗ್ರೆಸ್ ಸಮಯ ಹಾಳು ಮಾಡುತ್ತಿದೆ: ಬಿಜೆಪಿ ಆರೋಪ

ಸಂಸತ್‌ನಲ್ಲಿ ಕಾಂಗ್ರೆಸ್ ಗೊಂದಲದ ಸ್ಥಿತಿಯಲ್ಲಿದೆ ಎಂದು ಬಿಜೆಪಿ ಹೇಳಿದೆ. ಕಾಂಗ್ರೆಸ್ ಸಂಸತ್‌ನಲ್ಲಿ ಚರ್ಚೆ...
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Updated on: 

ನವದೆಹಲಿ: ಸಂಸತ್‌ನಲ್ಲಿ ಕಾಂಗ್ರೆಸ್ ಗೊಂದಲದ ಸ್ಥಿತಿಯಲ್ಲಿದೆ ಎಂದು ಬಿಜೆಪಿ ಹೇಳಿದೆ. ಕಾಂಗ್ರೆಸ್ ಸಂಸತ್‌ನಲ್ಲಿ ಚರ್ಚೆ ಮಾಡುವುದಕ್ಕಿಂತ ಹೊರಗೆ ಚರ್ಚೆ ಮಾಡಲು ಆಗ್ರಹಿಸುತ್ತಿದೆ . ಅದು ಪ್ರಮುಖ ಚರ್ಚೆಯೇ ಆಗಿರಲಿ ಅಥವಾ ದೇಶದ ರಕ್ಷಣೆಗೆ ಸಂಬಂಧಿಸಿದ ಚರ್ಚೆಯೇ ಆಗಿರಲಿ ಎಲ್ಲವನ್ನೂ ಹೊರಗೆ ನಿಂತು ಕಾಂಗ್ರೆಸ್ ಚರ್ಚಿಸುತ್ತಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕಾಂಗ್ರೆಸ್ ಈಗ ಗೊಂದಲದಲ್ಲಿದೆ. ಸಂಸತ್‌ನಲ್ಲಿ ನಿಂತು ಅವರು ಮಾತನಾಡುವ ರೀತಿ ನೋಡಿದರೆ ಹೀಗೆ ಅನಿಸುತ್ತದೆ. ಅವರ ಸ್ಥಾನಗಳು ಆಗಾಗ ಬದಲಾಗುತ್ತಲೇ ಇರುತ್ತದೆ ಎಂದು ಸಚಿವೆ ಹೇಳಿದ್ದಾರೆ.

ಅದೇ ವೇಳೆ ಬಿಜೆಪಿ ನಾಳೆ ಸರ್ವಪಕ್ಷ ಸಭೆ ಕರೆದಿದ್ದು, ಇದರಲ್ಲಿ ಪ್ರಧಾನವಾಗಿ ಸಂಸತ್ ಕಲಾಪದ ಬಗ್ಗೆ ಚರ್ಚೆ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com