

ರಾಮಪುರ: ಬ್ಯಾಂಕ್ ತನ್ನ ಗ್ರಾಹಕರ ಡೆಬಿಟ್ ಕಾರ್ಡ್ ನ ಪಿನ್ ಸಂಖ್ಯೆ ಕೇಳುವುದಿಲ್ಲ, ಕೇಳಿದರೆ ಅಂತಹವರ ವಿರುದ್ಧ ದೂರು ನೀಡಿ ಎಂಬ ಎಚ್ಚರಿಕೆ ಸಂದೇಶಗಳನ್ನು ಬ್ಯಾಂಕ್ ಗಳಲ್ಲಿ ನೋಡಿರುತ್ತಿರಿ. ಇಂತಹ ಎಚ್ಚರಿಕೆ ಸಂದೇಶ ನೀಡುವ ಬ್ಯಾಂಕ್ ಅಧಿಕಾರಿಗೆ ಇಲ್ಲೊಬ್ಬ ವಂಚನೆ ಮಾಡಿದ್ದಾನೆ.
ಉತ್ತರಪ್ರದೇಶದಲ್ಲಿರುವ ಬ್ಯಾಂಕ್ ನ ಅಧಿಕಾರಿಯೊಬ್ಬರು 50 ಸಾವಿರ ರೂಪಾಯಿ ವಂಚನೆಗೊಳಗಾಗಿದ್ದಾರೆ. ಕುಮುದಿನಿ ಶ್ರೀವಾಸ್ತವ ಎಂಬುವವರಿಗೆ ಕರೆ ಮಾಡಿದ ವ್ಯಕ್ತಿ ಅವರ ಡೆಬಿಟ್ ಕಾರ್ಡ್ ಬ್ಲಾಕ್ ಆಗಿದೆ, ಅದನ್ನು ಸರಿಪಡಿಸುವುದಕ್ಕೆ ಮುಂಬೈ ಕಚೇರಿಗೆ ಡೆಬಿಟ್ ಕಾರ್ಡ್ ನ ವಿವರಗಳು ಬೇಕಾಗಿದೆ ಎಂದು ಹೇಳಿದ್ದಾನೆ, ನಂತರ ತಮ್ಮ ಡೆಬಿಟ್ ಕಾರ್ಡ್ ನ ಗೌಪ್ಯ ಸಂಖ್ಯೆ ಹಾಗು ಇನ್ನಿತರ ಮಾಹಿತಿ ನೀಡಿದ್ದಾರೆ. ಇದಾದ ಕೆಲವೇ ಹೊತ್ತಿನಲ್ಲಿ ತಮ್ಮ ಖಾತೆಯಿಂದ 50 ಸಾವಿರ ರೂಪಾಯಿ ಕಣ್ಮರೆಯಾಗಿದೆ. ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.