ಚೆನ್ನೈಗೆ ಮತ್ತೆ ವಕ್ಕರಿಸಿದ ಮಳೆ: ಸಂಕಷ್ಟದಲ್ಲಿ ಜನತೆ

ಕುಂಭದ್ರೋಣ ಮಳೆಯಿಂದಾಗಿ ಈಗಾಗಲೇ ತತ್ತರಿಸಿಹೋಗಿರುವ ತಮಿಳುನಾಡಿನಲ್ಲಿ ಇದೀಗ ಮತ್ತೆ ಮಳೆರಾಯ ತನ್ನ ಆರ್ಭಟವನ್ನು ಮುಂದುವರೆಸಿದ್ದು, ಚೆನ್ನೈನಾದ್ಯಂತ ತುಂತುರು ಮಳೆಯಾಗುತ್ತಿರುವುದಾಗಿ ಬುಧವಾರ ತಿಳಿದುಬಂದಿದೆ...
ಚೆನ್ನೈಗೆ ಮತ್ತೆ ವಕ್ಕರಿಸಿದ ಮಳೆ: ಸಂಕಷ್ಟದಲ್ಲಿ ಜನತೆ (ಸಂಗ್ರಹ ಚಿತ್ರ)
ಚೆನ್ನೈಗೆ ಮತ್ತೆ ವಕ್ಕರಿಸಿದ ಮಳೆ: ಸಂಕಷ್ಟದಲ್ಲಿ ಜನತೆ (ಸಂಗ್ರಹ ಚಿತ್ರ)
Updated on: 

ಚೆನ್ನೈ: ಕುಂಭದ್ರೋಣ ಮಳೆಯಿಂದಾಗಿ ಈಗಾಗಲೇ ತತ್ತರಿಸಿಹೋಗಿರುವ ತಮಿಳುನಾಡಿನಲ್ಲಿ ಇದೀಗ ಮತ್ತೆ ಮಳೆರಾಯ ತನ್ನ ಆರ್ಭಟವನ್ನು ಮುಂದುವರೆಸಿದ್ದು, ಚೆನ್ನೈನಾದ್ಯಂತ ತುಂತುರು ಮಳೆಯಾಗುತ್ತಿರುವುದಾಗಿ ಬುಧವಾರ ತಿಳಿದುಬಂದಿದೆ.

ತಮಿಳುನಾಡಿದ ಕರಾವಳಿ ತೀರ ಪ್ರದೇಶ, ಚೆನ್ನೈ ಕನ್ಯಾಕುಮಾರಿ, ಮಧುರೈ, ತಿರುನಲ್ವೇಲಿ ಜಿಲ್ಲೆ ಸೇರಿದಂತೆ ದಕ್ಷಿಣಭಾಗದ ಜಿಲ್ಲೆಗಳಲ್ಲಿ ಡಿಸೆಂಬರ್ 11 ರವರೆಗೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮಳೆಯ ಎಚ್ಚರಿಕೆಯಿಂದಾಗಿ ಈಗಾಗಲೇ ಮುಂಜಾಗ್ರತೆ ವಹಿಸಿರುವ ದಕ್ಷಿಣ ವಲಯ ರೈಲ್ವೆ ವಿಭಾಗವು ಮುಂಬೈ, ಗುಜರಾತ್ ಹಾಗೂ ದೆಹಲಿಗೆ ತೆರಳಬೇಕಿದ್ದ ರೈಲುಗಳ ಓಡಾಟವನ್ನು ರದ್ದು ಮಾಡಿದ್ದಾರೆ. ಅಲ್ಲದೆ, ತಮಿಳುನಾಡಿನ 8 ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com