ಇಂಧನ ಬೇಡಿಕೆ, ಪರಿಸರ ರಕ್ಷಣೆ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ: ರಾಷ್ಟ್ರಪತಿ

ಇಂಧನ ಬೇಡಿಕೆ ಹಾಗೂ ಪರಿಸರ ರಕ್ಷಣೆ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾದ ಅಗತ್ಯವಿದೆ ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಯುಸಿ ಬರ್ಕಲೀ- ಹ್ಯಾಸ್ ಸ್ಕೂಲ್ ಆಫ್ ಬ್ಯುಸಿನೆಸ್ ನಿಂದ ಪ್ರಶಸ್ತಿ ಸ್ವೀಕರಿಸಿದ ರಾಷ್ಟ್ರಪತಿ ಐಎಎನ್ಎಸ್(ಚಿತ್ರ)
ಯುಸಿ ಬರ್ಕಲೀ- ಹ್ಯಾಸ್ ಸ್ಕೂಲ್ ಆಫ್ ಬ್ಯುಸಿನೆಸ್ ನಿಂದ ಪ್ರಶಸ್ತಿ ಸ್ವೀಕರಿಸಿದ ರಾಷ್ಟ್ರಪತಿ ಐಎಎನ್ಎಸ್(ಚಿತ್ರ)
Updated on: 

ನವದೆಹಲಿ: ಭಾರತ ತನ್ನ ಅಭಿವೃದ್ಧಿ ದರವನ್ನು ಶೇ.8 ರಷ್ಟು ಕಾಯ್ದುಕೊಳ್ಳಲು, ಇಂಧನ ಬೇಡಿಕೆ ಹಾಗೂ ಪರಿಸರ ರಕ್ಷಣೆ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾದ ಅಗತ್ಯವಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. 
ನವದೆಹಲಿಯಲ್ಲಿ ಯುಸಿ ಬರ್ಕಲೀ- ಹ್ಯಾಸ್ ಸ್ಕೂಲ್ ಆಫ್ ಬ್ಯುಸಿನೆಸ್ ನಿಂದ ಗಾರ್ವುಡ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಣಬ್ ಮುಖರ್ಜಿ, ವಿಶ್ವದ ಒಟ್ಟಾರೆ ಜನಸಂಖ್ಯೆಯ ಶೇ.17 ರಷ್ಟು ಜನಸಂಖ್ಯೆ ಭಾರತದಲ್ಲಿದೆ. ಆದರೆ ವಿಶ್ವ ಒಟ್ಟಾರೆ ಬಳಸುವ ವಿದ್ಯುತ್ ನ ಶೇ.5 ರಷ್ಟನ್ನು ಮಾತ್ರ ಭಾರತ ಬಳಸುತ್ತಿದ್ದು ಇಂಧನ ಬೇಡಿಕೆ ಪೂರೈಕೆ ಮಾಡುವುದರೊಂದಿಗೆ ಪರಿಸರವನ್ನು ರಕ್ಷಿಸುವುದು ಸವಾಲಿನ ಸಂಗತಿ ಎಂದು ಹೇಳಿದ್ದಾರೆ.
ಹೊಸತನ್ನು ಕಂಡುಹಿಡಿಯುವುದು ಸರ್ಕಾರಗಳಿಗೆ ಮುಖ್ಯವಾಗಿದ್ದು ಅಭಿವೃದ್ಧಿ ಹಾಗೂ ಬೆಳವಣಿಗೆಗೆ ನಾವೀನ್ಯತೆಯೇ ಚಾಲಕ, ಹೊಸತನ್ನು ಕಂದುಹಿಡಿಯುವುದರಿಂದ ಪರಿಸರದಲ್ಲಿ ಹೊಸ ವ್ಯವಸ್ಥೆ ಉಂಟುಮಾಡಲು ಸಾಧ್ಯ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com