40ಕ್ಕೂ ಅಧಿಕ ಮಂದಿಯ ಸಜೀವ ದಹನ ಗೈದ ಇಸಿಸ್..!

ಸುಮಾರು 40ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಧಾರುಣವಾಗಿ ಸುಟ್ಟುಹಾಕಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ..
ಇಸಿಸ್ ಉಗ್ರರು (ಸಂಗ್ರಹ ಚಿತ್ರ)
ಇಸಿಸ್ ಉಗ್ರರು (ಸಂಗ್ರಹ ಚಿತ್ರ)
Updated on

ಬಾಗ್ದಾದ್‌: ಸುಮಾರು 40ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಧಾರುಣವಾಗಿ ಸುಟ್ಟುಹಾಕಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ.

ಖಾಸಗಿ ಸುದ್ದಿ ಸಂಸ್ಥೆಯೊಂದು ಈ ಬಗ್ಗೆ ವರದಿ ಮಾಡಿದ್ದು, ಐಸಿಸ್‌ ಉಗ್ರರು ಇರಾಕ್‌ನ ಪಶ್ಚಿಮ ಪ್ರಾಂತ್ಯವಾಗಿರುವ ಅನ್‌ ಬಾರ್‌ನಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬಂಧಿಗಳು ಸೇರಿದಂತೆ 40ಕ್ಕೂ ಹೆಚ್ಚು ಮಂದಿಯನ್ನುಜೀವಂತವಾಗಿ ಸುಟ್ಟುಹಾಕುವ ಮೂಲಕ ಪೈಶಾಚಿಕ ಕೃತ್ಯ ಎಸಗಿದ್ದಾರೆ.

ಪೊಲೀಸ್‌ ಮುಖ್ಯಸ್ಥ ಕಾಸಿಂ ಅಲ್‌ ಉಬೇದಿ ಅವರನ್ನು ಮಾಧ್ಯಮ ವರದಿಗಳು ಉಲ್ಲೇಖೀಸಿದ್ದು, ಅಲ್‌ ಬಗ್ಧಾದಿ ಪಟ್ಟಣದಲ್ಲಿ ಮಂಗಳವಾರ ಸುಮಾರು 30ರಿಂದ 45 ಮಂದಿಯನ್ನು ಐಸಿಸ್‌ ಉಗ್ರರು ಜೀವಂತವಾಗಿ ಸುಟ್ಟು ಕೊಂದಿದ್ದಾರೆ. ಇವರಲ್ಲಿ ಹೆಚ್ಚಿನವರು ಆಲ್‌ಬು ಉಬೇದ್‌ ಸುನ್ನಿ ಪಂಗಡಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪೈಕಿ ಇವರಲ್ಲಿ ಸರ್ಕಾರ ಬೆಂಬಲಿತ ಸಹ್‌ವಾ ಅರೆ ಸೈನಿಕ ದಳಕ್ಕೆ ಸೇರಿದ ಪೊಲೀಸರು ಹಾಗೂ ಭದ್ರತಾ ಸಿಬಂದಿಗಳೂ ಸೇರಿದ್ದಾರೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಕ್ಸಿನ್‌ಹುವಾ ವಾರ್ತಾ ಸಂಸ್ಥೆ ವರದಿ ಮಾಡಿದೆ.

ಈ ಪೈಶಾಚಿಕ ಕೃತ್ಯ ಐನ್‌ ಅಲ್‌ ಅಸದ್‌ಗೆ ಸಮೀಪದಲ್ಲೇ ಇರುವ ಸ್ಥಳದಲ್ಲೇ ನಡೆದಿದ್ದು, ಈ ವಾಯು ನೆಲೆಯಲ್ಲಿ 300ಕ್ಕೂ ಅಧಿಕ ಅಮೆರಿಕದ ನೌಕಾ ಪಡೆಯ ಸಿಬಂದಿಗಳು ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com