ಜೈಲಿಂದ ವಂಜಾರಾ ಬಿಡುಗಡೆ

ಗುಜರಾತ್‍ನ ವಿವಾದಿತ ಪೊಲೀಸ್ ಅಧಿಕಾರಿ ಡಿ.ಜಿ. ವಂಜಾರಾ ಬುಧವಾರ ಬಿಡುಗಡೆಯಾಗಿದ್ದಾರೆ...
ವಿವಾದಿತ ಪೊಲೀಸ್ ಅಧಿಕಾರಿ ಡಿ.ಜಿ. ವಂಜಾರಾ (ಸಂಗ್ರಹ ಚಿತ್ರ)
ವಿವಾದಿತ ಪೊಲೀಸ್ ಅಧಿಕಾರಿ ಡಿ.ಜಿ. ವಂಜಾರಾ (ಸಂಗ್ರಹ ಚಿತ್ರ)

ಅಹಮದಾಬಾದ್: ಗುಜರಾತ್‍ನ ವಿವಾದಿತ ಪೊಲೀಸ್ ಅಧಿಕಾರಿ ಡಿ.ಜಿ. ವಂಜಾರಾ ಬುಧವಾರ ಬಿಡುಗಡೆಯಾಗಿದ್ದಾರೆ.

ಇಶ್ರತ್ ಜಹಾನ್ ಮತ್ತು ಸೋಹ್ರಾಬುದ್ದಿನ್ ಎನ್‍ಕೌಂಟರ್ ಪ್ರಕರಣದಲ್ಲಿ ಏಳೂವರೆ ವರ್ಷದಿಂದ ಸಬರ್‍ಮತಿ ಸೆಂಟರ್ ಜೈಲ್‍ನಲ್ಲಿ ಬಂಧಿತರಾಗಿದ್ದರು. ಇದೇ ವೇಳೆ, ಬಿಡುಗಡೆಯಿಂದ ಹರ್ಷಗೊಂಡ ಅವರ ಆಪ್ತವಲಯದವರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಬಿಡುಗಡೆ ಬಳಿಕ ಮಾತನಾಡಿದ ವಂಜಾರಾ, ನನಗೆ ಹಾಗೂ ಗುಜರಾತ್ ಪೊಲೀಸ್ ಅಧಿಕಾರಿಗಳಿಗೆ ಉತ್ತಮ ದಿನಗಳು ಇದೀಗ ಬಂದಿದೆ. ನನ್ನನ್ನು ಇಷ್ಟು ವರ್ಷ ಜೈಲಿನಲ್ಲಿ ಕೂರಿಸಿರುವುದರ ಹಿಂದೆ ರಾಜಕೀಯ ಹಿತಾಸಕ್ತಿಗಳು ಕೆಲಸ ಮಾಡಿವೆ ಎಂದು ಕಿಡಿಕಾರಿದ್ದಾರೆ. ನನ್ನ ಹಾಗೆಯೇ ಗುಜರಾತ್‍ನ ಕೆಲವು ಪೊಲೀಸ್ ಅಧಿಕಾರಿಗಳ ಮೇಲೆ ಸುಳ್ಳು ಹಾಗೂ ನಕಲಿ ಎನ್‍ಕೌಂಟರ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದೂ ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com