ಒಬಾಮಾಗೆ ರೇಷ್ಮೆ ಶಾಲು ಉಡುಗೊರೆ

ಗಣರಾಜ್ಯೋತ್ಸವ ಅಂಗವಾಗಿ ಭಾರತಕ್ಕೆ ಭೇಟಿ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಬರಾಕ್...
ಒಬಾಮಾಗೆ ರೇಷ್ಮೆ ಶಾಲು ಉಡುಗೊರೆ

ನವದೆಹಲಿ: ಗಣರಾಜ್ಯೋತ್ಸವ ಅಂಗವಾಗಿ ಭಾರತಕ್ಕೆ ಭೇಟಿ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾಗೆ ಮೈಸೂರಿನ ರೇಷ್ಮೆ ಶಾಲನ್ನು ಪ್ರಧಾನಿ ನರೇಂದ್ರ ಮೋದಿ ಉಡುಗೊರೆಯಾಗಿ ನೀಡಲಿದ್ದಾರೆ.

ಈ ಮೂಲಕ ಕರ್ನಾಟಕದ ಸಾಂಪ್ರದಾಯಿಕ ಉಡುಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ತನ್ನ ಹಿರಿಮೆ ಮೆರೆಯಲಿದೆ.

ದೇಶಕ್ಕೆ ಆಗಮಿಸುವ ವಿದೇಶಿ ಗಣ್ಯರಿಗೆ ಸಾಂಪ್ರಾದಾಯಿಕ ಉಡುಗೆ ಶಲ್ಯವನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ 50 ಶಲ್ಯ ತಯಾರಿಸಿ ಕೊಡಲು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ(ಕೆಎಸ್‌ಐಸಿ)ಗೆ ಆದೇಶ ನೀಡಲಾಗಿದೆ.

ಒಬಾಮಾರಿಗಾಗಿಯೇ ವಿಶೇಷವಾಗಿ ಬಿಳಿ ರೇಷ್ಮೆ ಶಲ್ಯವನ್ನು ತಯಾರಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com