ಪುಣೆಯಲ್ಲಿ ಮರ್ಯಾದಾ ಹತ್ಯೆ

ಮನೆಯವರ ವಿರೋಧದ ನಡುವೆ ಪ್ರೇಮ ವಿವಾಹ ಮಾಡಿಕೊಂಡಿದ್ದಾನೆ ಎಂಬ ಕಾರಣಕ್ಕಾಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಪುಣೆ: ಮನೆಯವರ ವಿರೋಧದ ನಡುವೆ ಪ್ರೇಮ ವಿವಾಹ ಮಾಡಿಕೊಂಡಿದ್ದಾನೆ ಎಂಬ ಕಾರಣಕ್ಕಾಗಿ ಯುವತಿಯ ಸಂಬಂಧಿಕರೇ ಅಳಿಯನನ್ನು ಕೊಂದು ಹಾಕಿರುವ ಘಟನೆ ಶುಕ್ರವಾರ ಪುಣೆಯಲ್ಲಿ ನಡೆದಿದೆ.

ಕುಟುಂಬ ಗೌರವದ ಹೆಸರಿನಲ್ಲಿ ಹತ್ಯೆಗಳು ದೇಶದೆಲ್ಲೆಡೆ ಅವ್ಯಾಹತವಾಗಿ ಮುಂದುವರೆಯುತ್ತಿದ್ದು, ಇದಕ್ಕೊಂದು ಸೇರ್ಪಡೆಯಂತೆ ಪುಣೆಯಲ್ಲೊಂದು ಮರ್ಯಾದಾ ಹತ್ಯೆ ನಡೆದಿದೆ. ಹಲವು ವರ್ಷಗಳಿಂದ ಪ್ರೀತಿಸಿ ಇತ್ತೀಗಷ್ಟೇ ವಿವಾಹವಾಗಿದ್ದ ದಂಪತಿಗಳ ಮೇಲೆ ಕೆಂಡಾಮಂಡಲವಾಗಿದ್ದ, ಯುವತಿಯ ಸಂಬಂಧಿಕರು ಯುವಕನು ಒಬ್ಬಂಟಿಯಾಗಿ ಸಿಗುವುದನ್ನು ಕಾದು ಗುಂಡು ಹಾರಿಸಿ ತದನಂತರ ಚಾಕುವಿನಿಂದ ಇರಿದು ಕೊಂದು ಹಾಕಿದ್ದಾರೆ.

ಯುವಕ ಸಾವನ್ನಪ್ಪಿದ ವಿಚಾರ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುವ ವೇಳೆ ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಯುವಕನಿಗೆ ಗುಂಡು ಹಾರಿಸಿ, ಚಾಕುವಿನಿಂದ ಇರಿಯುತ್ತಿದ್ದಂತ ದೃಶ್ಯಗಳು ಪೊಲೀಸರಿಗೆ ದೊರಕಿದೆ. ಈ ಬಗ್ಗೆ ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಯುವತಿಯ ಸಂಬಂಧಿಕರೇ ಈ ದುಷ್ಕೃತ್ಯವನ್ನು ನಡೆಸಿರುವುದಾಗಿ ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com