

ನವದೆಹಲಿ: ಗೋವುಗಳನ್ನು ಹತ್ಯೆ ಮಾಡುವುದು ಅಥವಾ ಅವುಗಳನ್ನು ಕಳ್ಳ ಸಾಗಾಣಿಕೆ ಮಾಡುವುದು ಹಿಂದೂ ಹೆಣ್ಣನ್ನು ಅತ್ಯಾಚಾರ ಮಾಡುವುದಕ್ಕೆ ಮತ್ತು ದೇಗುಲವನ್ನು ಕೆಡವುದಕ್ಕೆ ಸಮ ಎಂದು ಪಶ್ಚಿಮ ಬಂಗಾಳದ ಆರೆಸ್ಸೆಸ್ಸ್ ವಕ್ತಾರ ಜಿಷ್ಣು ಬಸು ಹೇಳಿದ್ದಾರೆ.
ಭಾರತದಿಂದ ಬಾಂಗ್ಲಾದೇಶಕ್ಕೆ ಗೋವುಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿ ಭಾಷಣ ಮಾಡುತ್ತಿದ್ದ ವೇಳೆ ಬಸು ಈ ಮಾತನ್ನಾಡಿದ್ದಾರೆ.
ಭಾರತದಿಂದ ಸಾವಿರಗಟ್ಟಲೆ ಗೋವುಗಳನ್ನು ಬಾಂಗ್ಲಾದೇಶಕ್ಕೆ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಸುದ್ದಿ ತಿಳಿದುಬಂದ ನಂತರ ಗಡಿಪ್ರದೇಶದಲ್ಲಿ ಹೆಚ್ಚಿನ ಸುರಕ್ಷಾಪಡೆಯನ್ನು ಕೇಂದ್ರ ಸರ್ಕಾರ ನಿಯೋಜಿಸಿದೆ.
ಅಂತರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಬಿಎಸ್‌ಎಫ್ ಇಲ್ಲಿಯವರೆಗೆ ಕಳ್ಳ ಸಾಗಾಣಿಕೆಯಾಗುತ್ತಿದ್ದ 90,000 ಗೋವುಗಳನ್ನು ರಕ್ಷಿಸಿದ್ದು, ಇದಕ್ಕೆ ಸಂಬಂಧಿಸಿದಂತೆ 400 ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಿದೆ.