ಪ್ರಧಾನಿ ನಿಧಿಯಿಂದ ಹಣ ಪಡೆದಾತ ಸಾವು

ಕಿಡ್ನಿ ಕಸಿಗಾಗಿ ಪ್ರಧಾನಿ ಕಚೇರಿಯಿಂ ದ ನೆರವು ಪಡೆದು, ಶಸ್ತ್ರಚಿಕಿತ್ಸೆಗಾಗಿ ಕಾಯುತ್ತಿದ್ದ 33 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಸಂತೋಷ್ ಮೃತ ವ್ಯಕ್ತಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಲಖನೌ: ಕಿಡ್ನಿ ಕಸಿಗಾಗಿ ಪ್ರಧಾನಿ ಕಚೇರಿಯಿಂದ ನೆರವು ಪಡೆದು, ಶಸ್ತ್ರಚಿಕಿತ್ಸೆಗಾಗಿ ಕಾಯುತ್ತಿದ್ದ 33 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಸಂತೋಷ್ ಮೃತ ವ್ಯಕ್ತಿ. ಸಂತೋಷ್ ಅವರು ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಸಿ ಕ್ಷೇತ್ರದ ಮತದಾರರಾಗಿದ್ದು, ಎರಡೂ ಕಿಡ್ನಿಗಳ ವೈಫಲ್ಯದಿಂದಾಗಿ ಲಖನೌನ ಸಂಜಯ್ ಗಾಂಧಿ ವೈಧ್ಯಕೀಯ ಕಾಲೇಜಿನಲ್ಲಿ 2014ರ ನವೆಂಬರ್ ನಿಂದಲೂ ಚಿಕಿತ್ಸೆ ಪಡೆಯುತ್ತಿದ್ದರು.

ಕಿಡ್ನಿ ಕಸಿಗೆ ರು.4.37ಲಕ್ಷ ವೆಚ್ಚವಾ-ಗುತ್ತದೆ ಎಂದು ವೈದ್ಯರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿಯಿಂದ ನೆರವು ಕೋರಿದ್ದ ಸಂತೋಷ್, 2.17ಲಕ್ಷ ನೆರವು ಪಡೆಯುವಲ್ಲಿ ಯಶಸ್ವಿಯಾಗಿದ್ದರಾದರೂ, ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ಬುಧವಾರ ಮೃತಪಟ್ಟಿದ್ದಾರೆ.

ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಾಗಿ ಎಂಟು ತಿಂಗಳ ಅವಧಿಗೆ ಶಸ್ತ್ರಚಿಕಿತ್ಸಾ ಕೊಠಡಿ ನಿಗದಿಯಾಗಿದೆ. ಮೃತ ಸಂತೋಷ್ ಕುಮಾರ್ಅವರೂ ಈ ಪಟ್ಟಿಯಲ್ಲಿದ್ದರು,'' ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಸಂತೋಷ್ ಸಾವು ಸಂಭವಿಸಿದೆ ಎಂದು ಸಂತೋಷ್ ಸೋದರಿ ರೀತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com