

ನವದೆಹಲಿ: ವಿರೋಧಪಕ್ಷಗಳ ಒತ್ತಡ ತಂತ್ರಗಳಿಗೆ ಸರ್ಕಾರ ಈಡಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು, ಕಾಂಗ್ರೆಸ್ ನ ಬೇಡಿಕೆಯಂತೆ ಯಾವೊಬ್ಬ ಸಚಿವರು ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಚಿವರ ರಾಜೀನಾಮೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಎನ್ ಡಿಎ ಸರ್ಕಾರದ ಯಾವೊಬ್ಬ ಸಚಿವರು ಕೂಡ ಯಾವುದೇ ಅಕ್ರಮ ಎಸಗಿಲ್ಲ ಎಂದು ಅವರು ದೆಹಲಿಯಲ್ಲಿಂದು ಸರ್ವಪಕ್ಷ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ಮಧ್ಯಪ್ರದೇಶದ ವ್ಯಾಪಂ ಹಗರಣ ಮತ್ತು ಲಲಿತ್ ಮೋದಿ ಪ್ರಕರಣ ವಿರುದ್ಧ ಕಾಂಗ್ರೆಸ್ ನ ವ್ಯಾಪಕ ಚೀಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರೊಬ್ಬರಿಂದಲೂ ಸಲಹೆ, ನಿರ್ಧಾರ ಕೇಳುವ ಅಗತ್ಯವಿಲ್ಲ. ಸರ್ಕಾರಕ್ಕೆ ಯಾರೂ ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.