ಅಸ್ಸಾಂ ರೈಫಲ್ಸ್ ಕ್ಯಾಂಪ್ ಮೇಲೆ ಶಂಕಿತ ಉಗ್ರರಿಂದ ಗುಂಡಿನ ದಾಳಿ

ಅರುಣಾಚಲ ಪ್ರದೇಶದ ತಿರಪ್ ಜಿಲ್ಲೆಯ ಲಝು ಪ್ರದೇಶದಲ್ಲಿ ಅಸ್ಸಾಂ ರೈಫಲ್ಸ್ ಕ್ಯಾಂಪ್ ಮೇಲೆ ಶಂಕಿತ ಎನ್‌ಎಸ್‌ಸಿಎನ್ ಉಗ್ರರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಇಟಾನಗರ: ಅರುಣಾಚಲ ಪ್ರದೇಶದ ತಿರಪ್ ಜಿಲ್ಲೆಯ ಲಝು ಪ್ರದೇಶದಲ್ಲಿ ಅಸ್ಸಾಂ ರೈಫಲ್ಸ್ ಕ್ಯಾಂಪ್ ಮೇಲೆ ಶಂಕಿತ ಎನ್‌ಎಸ್‌ಸಿಎನ್ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.

ಇಂದು ಮಧ್ಯಾಹ್ನ 2.30ರ ಸುಮಾರಿಗೆ ಇಂಡೋ-ಮೈಯನ್ಮಾರ್ ಗಡಿಯಲ್ಲಿ ಸುಮಾರು 35 ಶಂಕಿತ ಉಗ್ರರ ತಂಡ ಸೇನಾ ಕ್ಯಾಂಪ್ ಮೇಲೆ ಗುಂಡಿನ ದಾಳಿ ನಡೆಸಿದೆ ಎಂದು ತಿರಪ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ.

ದಾಳಿಯಲ್ಲಿ ಸಾವು-ನೋವು ಸಂಭವಿಸಿದ ಬಗ್ಗೆ ಇನ್ನು ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಎನ್‌ಎಸ್‌ಸಿಎನ್ ಮೂರು ದಿನಗಳ ಹಿಂದಷ್ಟೇ ಮಣಿಪುರದಲ್ಲಿ ಗಸ್ತು ತಿರುಗುತ್ತಿದ್ದ ಸೇನಾಪಡೆಯ ಮೇಲೆ ಗುಂಡಿನ ದಾಳಿ ನಡೆಸಿ 20 ಸೈನಿಕರನ್ನು ಹತ್ಯೆ ಮಾಡಿ, ದಾಳಿಯ ಹೊಣೆ ಹೊತ್ತುಕೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com