ಅಲ್ ಖೈದಾ ಮುಖ್ಯಸ್ಥ ನಾಸಿರ್ ಅಲ್ ವಾಹಿಶಿ ಸಾವು: ಖಚಿತ ಪಡಿಸಿದ ಅಲ್ ಖೈದಾ

ಅಮೆರಿಕ ಸೇನೆ ನಡೆಸಿದ ಬಾಂಬ್ ದಾಳಿಯಲ್ಲಿ ಯೆಮೆನ್ ಅಲ್ ಖೈದಾದ ಮುಖ್ಯಸ್ಥ ನಾಸಿರ್ ಅಲ್ ವಾಹಿಶಿ ಸಾವನ್ನಪ್ಪಿರುವುದಾಗಿ ಅಲ್ ಖೈದಾ ಖಚಿತಪಡಿಸಿದೆ.
ನಾಸಿರ್ ಅಲ್ ವಾಹಿಶಿ
ನಾಸಿರ್ ಅಲ್ ವಾಹಿಶಿ

ಯೆಮೆನ್: ಅಮೆರಿಕ ಸೇನೆ ನಡೆಸಿದ ಬಾಂಬ್ ದಾಳಿಯಲ್ಲಿ ಯೆಮೆನ್ ಅಲ್ ಖೈದಾದ ಮುಖ್ಯಸ್ಥ ನಾಸಿರ್ ಅಲ್ ವಾಹಿಶಿ ಸಾವನ್ನಪ್ಪಿರುವುದಾಗಿ ಅಲ್ ಖೈದಾ ಖಚಿತಪಡಿಸಿದೆ.

ಯೆಮೆನ್ ಮುಖ್ಯಸ್ಥ ಅಲ್ ವಾಹಿಶಿ ಸಾವನ್ನಪ್ಪಿರುವುದಾಗಿ ಅರೇಬಿಯನ್ ಪ್ರಾಂತ್ಯದ ಅಲ್ ಖೈದಾ ಮಾಧ್ಯಮ ಶಾಖೆ ಬಿಡುಗಡೆ ಮಾಡಿರುವ ವೀಡಿಯೋದಲ್ಲಿದೆ. ಈ ಸಂಘಟನೆಯ ವ್ಯಕ್ತಿಯೊಬ್ಬ ಓದುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಒಸಾಮಾ ಬಿನ್ ಲಾಡೆನ್ ಹತ್ಯೆಯ ನಂತರ ಅಲ್ ಖೈದಾ ಸಂಘಟನೆಗೆ ಜಾಗತಿಕವಾಗಿ ದೊಡ್ಡ ಹೊಡೆವಾಗಿತ್ತು. ವಾಹಿಶಿ ಒಸಾಮಾ ಬಿನ್ ಲಾಡೆನ್ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ.

ನಮ್ಮ ಮುಸ್ಲಿಂ ದೇಶ, ನಿಮ್ಮ ಹೀರೋಗಳ ಹೀರೋ ಹಾಗೂ ಮಾಸ್ಟರ್ ಗಳ ನಿಮ್ಮ ಮಾಸ್ಟರ್ ನಮ್ಮನ್ನೆಲ್ಲಾ ಅಗಲಿ ಅಲ್ಲಾನ ಪಾದ ಸೇರಿದ್ದಾರೆ ಎಂದು ಅಲ್ ಖೈದಾ ಸಂಘಟನೆಯ ಖಾಲೀದ್ ಬಾಟ್ರಾಫಿ ವೀಡಿಯೋದಲ್ಲಿ ತಿಳಿಸಿದ್ದಾನೆ. ಅಲ್ಲದೇ ಅಮೆರಿಕದ ವಿರುದ್ಧದ ತಮ್ಮ ಯುದ್ಧ ಮುಂದುವರಿಯುವುದಾಗಿ ಶಪಥ ಮಾಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com