ವಾಟ್ಸ್‌ಪ್‌ ರೇಪ್‌ ವಿಡಿಯೋ: ಐವರ ಪೈಕಿ ಓರ್ವನ ಬಂಧನ

ಮಹಿಳೆಯರಿಬ್ಬರನ್ನು ಅತ್ಯಾಚಾರ ಮಾಡಿ ವಾಟ್ಸ್‌ಪ್‌ ಗೆ ವಿಡಿಯೋ ಅಪ್ ಲೋಡ್ ಮಾಡಿದ್ದ ಐವರು ಕೀಚಕರ ಪೈಕಿ ಓರ್ವನನ್ನು ಬಂಧಿಸಲಾಗಿದೆ.
ಗ್ಯಾಂಗ್ ರೇಪ್ ಆರೋಪಿಗಳು
ಗ್ಯಾಂಗ್ ರೇಪ್ ಆರೋಪಿಗಳು
Updated on: 

ನವದೆಹಲಿ: ಮಹಿಳೆಯರಿಬ್ಬರನ್ನು ಅತ್ಯಾಚಾರ ಮಾಡಿ ವಾಟ್ಸ್‌ಪ್‌ ಗೆ ವಿಡಿಯೋ ಅಪ್ ಲೋಡ್ ಮಾಡಿದ್ದ ಐವರು ಕೀಚಕರ ಪೈಕಿ ಓರ್ವನನ್ನು ಒಡಿಶಾದಲ್ಲಿ ಬಂಧಿಸಲಾಗಿದೆ.

ಭುವನೇಶ್ವರದ ಸುಬ್ರತ ಸಾವು ಎಂಬಾತನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದು ಇಂದು ಆತನನ್ನು ದೆಹಲಿಗೆ ಕರೆತರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅತ್ಯಾಚಾರ ವಿಡಿಯೋಗಳು ವಾಟ್ಸ್‌ಪ್‌ ನಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಕಾರ್ಯಕರ್ತೆ ಸುನೀತಾ ಕೃಷ್ಣನ್ ಅವರು ಆರು ತಿಂಗಳಷ್ಟು ಹಳೆಯ ಎರಡು ಪ್ರತ್ಯೇಕ ವಾಟ್ಸ್‌ಪ್‌ ರೇಪ್‌ ವಿಡಿಯೋ ಚಿತ್ರಿಕೆಗಳನ್ನು ಒದಗಿಸಿದ್ದರು. ಅದರಲ್ಲಿ ಕಂಡುಬರುವ ಐವರು ಅತ್ಯಾಚಾರಿಗಳನ್ನು ಹಿಡಿದೇ ತೀರಬೇಕೆಂಬ ಸಂಕಲ್ಪದಲ್ಲಿ ತೊಡಗಿದ್ದಾರೆ.

ಸುನೀತ ಕೃಷ್ಣನ್ ಮನದಾಳವನ್ನು ಅರಿತ ಸುಪ್ರೀಂಕೋರ್ಟ್ ವಾಟ್ಸ್‌ಪ್‌ ರೇಪ್‌ ವಿಡಿಯೋ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಂಟು ಪ್ರಕರಣಗಳನ್ನು ದಾಖಲಿಸಿದ್ದು, ಶಂಕಿತ ಆರೋಪಿಗಳು ಪಶ್ಚಿಮ ಬಂಗಾಳ, ಒಡಿಶಾ ಮತ್ತು ಉತ್ತರ ಪ್ರದೇಶವರಾಗಿದ್ದಾರೆ ಎಂದು ಶಂಕಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com