ಆಡಿ ಕಾರಿನ ಜೊತೆ ಬಿಹಾರ ವೈದ್ಯ, ಪತ್ನಿ ನಾಪತ್ತೆ!

ಗಯಾದ ಪ್ರಸಿದ್ಧ ವೈದ್ಯ ದಂಪತಿ ದುಬಾರಿ ಬೆಲೆಯ ಆಡಿ ಕಾರಿನ ಜೊತೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ...
ಡಾ. ಪಂಕಜ್ ಗುಪ್ತಾ ಪತ್ನಿ ಶುಭ್ರಾ ಗುಪ್ತಾ
ಡಾ. ಪಂಕಜ್ ಗುಪ್ತಾ ಪತ್ನಿ ಶುಭ್ರಾ ಗುಪ್ತಾ

ಪಾಟ್ನಾ: ಗಯಾದ ಪ್ರಸಿದ್ಧ ವೈದ್ಯ ದಂಪತಿ ದುಬಾರಿ ಬೆಲೆಯ ಆಡಿ ಕಾರಿನ ಜೊತೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ.

ಆಡಿ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ದಂಪತಿಯನ್ನು ಕಾರಿನ ಜೊತೆಯೇ ಅಪಹರಣ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಗಯಾದಲ್ಲಿ ಮಕ್ಕಳ ತಜ್ಞರಾಗಿರುವ ಡಾ. ಪಂಕಜ್ ಗುಪ್ತಾ ಪತ್ನಿ ಶುಭ್ರಾ ಗುಪ್ತಾ ಜೊತೆ ಜಾರ್ಖಂಡ್ ನ ಗಿರಿದಿಹ್ ನಿಂದ ಗಯಾಕ್ಕೆ ಹಿಂದಿರುಗುತ್ತಿದ್ದ ಮಾರ್ಗ ಮಧ್ಯೆ ನಾಪತ್ತೆಯಾಗಿದ್ದಾರೆ.  ವೈದ್ಯರ ಪತ್ತೆಗೆ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com