ಸೆಕ್ಯೂರಿಟಿ ಬಗ್ಗೆ ಮಾಹಿತಿ ನೀಡಿ- ಜಶೋದಾ ಬೆನ್ ರಿಂದ 2ನೇ ಬಾರಿ ಮನವಿ

ಗುಜರಾತ್ ಸರ್ಕಾರ ತಮಗೆ ನೀಡಿರುವ ರಕ್ಷಣೆ ಬಗ್ಗೆ ಮಾಹಿತಿ ನೀಡಬೇಕೆಂದು, ಪ್ರಧಾನಿ ನರೇಂದ್ರಮೋದಿ ಪತ್ನಿ....
ಜಶೋದಾ ಬೆನ್
ಜಶೋದಾ ಬೆನ್

ಅಹಮದಾಬಾದ್: ಗುಜರಾತ್ ಸರ್ಕಾರ ತಮಗೆ ನೀಡಿರುವ ರಕ್ಷಣೆ ಬಗ್ಗೆ ಮಾಹಿತಿ ನೀಡಬೇಕೆಂದು, ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋದಾ ಬೆನ್ ನಾಲ್ಕು ತಿಂಗಳ ನಂತರ ಮತ್ತೆ 2ನೇ ಬಾರಿ ಅರ್ಜಿ ಸಲ್ಲಿಸಿದ್ದಾರೆ.
ಶನಿವಾರ ತಮ್ಮ ಪರ ವಕೀಲ ಸಂದೀಪ್ ಮೋದಿಯೊಂದಿಗೆ ಆಗಮಿಸಿದ ಜಶೋದಾ ಬೆನ್ ಗುಜರಾತ್ ನ ಗಾಂಧಿನಗರದಲ್ಲಿರುವ ರಾಜ್ಯ ಮಾಹಿತಿ ಆಯೋಗಕ್ಕೆ ಅರ್ಜಿ ನೀಡಿದ್ದಾರೆ.
ಜಶೋದಾ ಬೆನ್ ಮಾಹಿತಿ ಹಕ್ಕು ಕಾಯ್ದೆಯಡಿ 2014ರ ನವೆಂಬರ್ ರಂದು ತಮ್ಮ ಸೆಕ್ಯೂರಿಟಿ ಬಗ್ಗೆ ಮಾಹಿತಿ ಕೇಳಿದ್ರು. ಆದ್ರೆ ಇದುವರೆಗೆ ಯಾವುದೇ ಮಾಹಿತಿ ನೀಡದ ಕಾರಣ ಮತ್ತೆ ಮನವಿ ಮಾಡಿದ್ದಾರೆ.
ಕಾನೂನಿನ ಪ್ರಕಾರ ದೇಶದ ಪ್ರಧಾನ ಮಂತ್ರಿ ಪತ್ನಿಗೆ ನೀಡಬೇಕಾದ ಸೆಕ್ಯೂರಿಟಿ ಬಗೆಗಿನ ಮಾಹಿತಿ ನೀಡುವಂತೆ ಜಶೋದಾ ಬೆನ್ ಅರ್ಜಿಯಲ್ಲಿ ಕೋರಿದ್ದಾರೆ.
ಸದ್ಯ ತನ್ನ ಸಹೋದರ ಅಶೋಕ್ ಬೆನ್ ಜೊತೆ ಮೆಹ್ಸನಾ ಜಿಲ್ಲೆಯಲ್ಲಿ ವಾಸವರುವ ಜಶೋದಾ ಬೆನ್ ಗೆ ಮೆಹ್ಸನಾ ಪೊಲೀಸರು ಜಶೋದಾ ಅವರ ರಕ್ಷಣೆಗಾಗಿ 10 ಮಂದಿ ಪೊಲೀಸರನ್ನು ನಿಯೋಜಿಸಿದ್ದಾರೆ. ಆದರೆ ಅವರಿಗೆ ನೀಡಿರುವ ಭದ್ರತೆ ಬಗ್ಗೆ ನಂಬಿಕೆ ಇಲ್ಲವಂತೆ. ಹೀಗಾಗಿ ತಮ್ಮ ಸೆಕ್ಯೂರಿಟಿಗಾಗಿ ನೀಡಿರುವ ಮಾಹಿತಿ ನೀಡಬೇಕೆಂದು ಅವರು ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com