ನೇಪಾಳದಲ್ಲಿ ಮಂಗಳವಾರ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 96ಕ್ಕೇರಿಕೆ

ಕಳೆದ ಮಂಗಳವಾರ ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ 96ಕ್ಕೆ ಏರಿಕೆಯಾಗಿದೆ ಎಂದು....
ಭೂಕಂಪದ ನಂತರ ರಸ್ತೆಗೆ ಬಂದು ಕುಳಿತಿರುವ ಜನ
ಭೂಕಂಪದ ನಂತರ ರಸ್ತೆಗೆ ಬಂದು ಕುಳಿತಿರುವ ಜನ

ಕಠ್ಮಂಡು: ಕಳೆದ ಮಂಗಳವಾರ ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ 96ಕ್ಕೆ ಏರಿಕೆಯಾಗಿದೆ ಎಂದು ಗುರುವಾರ ನೇಪಾಳ ಪೊಲೀಸರು ತಿಳಿಸಿದ್ದಾರೆ.

ಕಠ್ಮಂಡುದಿಂದ 130 ಕಿ.ಮೀ. ದೂರದಲ್ಲಿರುವ ಡೊಲಖ ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನ 12.30ರ ಸುಮಾರಿಗೆ 7.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಭೂಕಂಪದ ಪರಿಣಾಮ ಹಲವು ಕಟ್ಟಡಗಳು ನೆಲಕ್ಕುರಿಳಿ, ಸಾವಿರಾರು ಜನ ಗಾಯಗೊಂಡಿದ್ದರು.

ನೇಪಾಳದಲ್ಲಿ ಕಳೆದ ಏಪ್ರಿಲ್ 25ರಂದು ಸಂಭವಿಸಿದ್ದ 7.9 ತೀವ್ರತೆಯ ಭಾರಿ ಭೂಕಂಪದಿಂದ 8,200 ಮಂದಿ ಮೃತಪಟ್ಟಿದ್ದರು ಮತ್ತು 17 ಸಾವಿರ ಜನ ತೀವ್ರವಾಗಿ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com