

ಗಯಾ: ಬಿಹಾರದ ಬರಚಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಸೊಂಧಿ ಗ್ರಾಮದಲ್ಲಿ ಪೊಲೀಸರು ಎನ್‌ಕೌಂಟರ್ ನಡೆಸಿದ ಬೆನ್ನಲ್ಲೇ ನಕ್ಸಲರು ಗಯಾ ಜಿಲ್ಲೆಯ ಅಮಾಸ್‌ನಲ್ಲಿ 32 ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.
'ಬೆಳಗಿನ ಜಾವ 1 ಗಂಟೆಯ ಸುಮಾರಿಗೆ ಅವರು ನಮ್ಮ ಕಾರನ್ನು ತಡೆದು, ನಾವು ಯಾರು ಗೊತ್ತಾ ಅಂತ ಕೇಳಿದರು. ಅದಕ್ಕೆ ನಾವು ಗೊತ್ತಿಲ್ಲ ಎಂದೆವು. ಹಾಗ ಅವರು ನಾವು ನಕ್ಸಲು ಎಂದು ಹೇಳಿದರು. ಅಲ್ಲದೆ ನಮ್ಮನ್ನು ಕಾರಿನಿಂದ ಕೆಳಗಿಳಿಸಿ, ಅದಕ್ಕೆ ಬೆಂಕಿ ಹಚ್ಚಿದರು' ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಸಿಆರ್‌ಪಿಎಫ್ ಮತ್ತು ಜಿಲ್ಲಾ ಪೊಲೀಸರು ಜಂಟಿಯಾಗಿ ಭಾನುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಮಹಿಳಾ ನಕ್ಸಲ್ ಒಬ್ಬಳನ್ನು ಹತ್ಯೆ ಮಾಡಲಾಗಿತ್ತು.