ಅಜ್ಞಾತ ಮಾನವರಹಿತ ಪ್ಯಾರಚೂಟ್ ಪತ್ತೆ: ಸ್ಥಗಿತವಾಗಿದ್ದ ಮುಂಬೈ ವಿಮಾನ ಹಾರಾಟ

ಮುಂಬೈನ ವಿಮಾನ ನಿಲ್ದಾಣ ಸಮೀಪ ಭಾನಂಗಳದಲ್ಲಿ ಐದು ಅಜ್ಞಾತ ಮಾನವರಹಿತ ಪ್ಯಾರಚೂಟ್‌ ಪತ್ತೆಯಾಗಿದ ವಿಷಯ ತಡವಾಗಿ ಬೆಳಕಿಗೆ ಬಂದಿದೆ...
ಐದು ಅಜ್ಞಾತ ಮಾನವರಹಿತ ಪ್ಯಾರಚೂಟ್
ಐದು ಅಜ್ಞಾತ ಮಾನವರಹಿತ ಪ್ಯಾರಚೂಟ್

ಮುಂಬೈ: ಮುಂಬೈನ ವಿಮಾನ ನಿಲ್ದಾಣ ಸಮೀಪ ಭಾನಂಗಳದಲ್ಲಿ ಐದು ಅಜ್ಞಾತ ಮಾನವರಹಿತ ಪ್ಯಾರಚೂಟ್‌ ಪತ್ತೆಯಾಗಿದ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಅಜ್ಞಾತ ಮಾನವರಹಿತ ಪ್ಯಾರಚೂಟ್‌ ಗಳು ಕಳೆದ ಶನಿವಾರ ಮುಂಬೈನ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದವು. ಇದರಿಂದ ಕೆಲಕಾಲ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತಲ್ಲದೆ ಸ್ವಲ್ಪ ಸಮಯ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.

ಇನ್ನು ಈ ಬಗ್ಗೆ ಉನ್ನತಮಟ್ಟದ ತನಿಖೆಗೆ ಕೇಂದ್ರ ಸಚಿವಾಲಯ ಆಗ್ರಹಿಸಿದೆ. ಈ ಸಂಬಂಧ ಮುಂಬೈ ಪೊಲೀಸರು, ಮುಂಬೈ ನಗರದಲ್ಲಿರುವಂಥ ಎಲ್ಲಾ ಪ್ಯಾರಾಗ್ಲೈಡ್‌ ಸಂಸ್ಥೆಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com