ಬೇಹುಗಾರಿಕಾ ಉಪಕರಣಗಳ ಖರೀದಿ ವಿಚಾರ: ಕೇಜ್ರಿವಾಲ್ ನಿವಾಸದೆದುರು ಬಿಜೆಪಿ ಪ್ರತಿಭಟನೆ

ದೆಹಲಿ ಆಪ್ ಸರ್ಕಾರ ಬೇಹುಗಾರಿಕಾ ಉಪಕರಣಗಳ ಖರೀದಿಗೆ ಒಪ್ಪಿಗೆ ನೀಡಿದೆ ಎಂದು ಆರೋಪಿಸಿ....
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on: 

ನವದೆಹಲಿ: ದೆಹಲಿ ಆಪ್ ಸರ್ಕಾರ ಬೇಹುಗಾರಿಕಾ ಉಪಕರಣಗಳ ಖರೀದಿಗೆ ಒಪ್ಪಿಗೆ ನೀಡಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದೆದುರು ಪ್ರತಿಭಟನೆ ಕೈಗೊಂಡಿತ್ತು.

ಬೇಹುಕಾರಿಗಾ ಸಾಧನಗಳನ್ನು ಖರೀದಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ದೆಹಲಿ ಸರ್ಕಾರ ಆ ಆರೋಪವನ್ನು ಅಲ್ಲಗಳೆದಿದೆ. ಆದರೆ ಭ್ರಷ್ಟಾಚಾರ ವಿರೋಧಿ ಶಾಖೆಗಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಬೇಹುಗಾರಿಕಾ ಉಪಕರಣಗಳ ಖರೀದಿಗೆ ಸಚಿವ ಸಂಪುಟ ಅನುಮೋದನೆ ನೀಡಿರುವ ಮಾಹಿತಿ ಸೋರಿಕೆಯಾಗಿರುವುದು, ಆಪ್ ಸರ್ಕಾರದ ಮೇಲೆ ಅನುಮಾನ ಮೂಡುವಂತೆ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

ಇನ್ನು ತನ್ನ ನೆಲೆಯನ್ನು ಭದ್ರಗೊಳಿಸಲು ಕೇಜ್ರಿವಾಲ್ ಸರ್ಕಾರ ಬೇಹುಗಾರಿಕಾ ಸಾಧನಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಆಪಾದಿಸಿದೆ.

ಗೂಢಚಾರಿಕೆ ಉಪಕರಣಗಳನ್ನು ಖರೀದಿಸುವ ಪತ್ರಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಹಿ ಹಾಕಿದ್ದಾರೆ. ಆಪ್ ಸರ್ಕಾರ ಜನತೆಯ ಖಾಸಗೀತನಕ್ಕೆ ಧಕ್ಕೆ ತರಲು ಹೊರಟಿದೆ. ದೂರವಾಣಿ ಕರೆಗಳನ್ನು ಕದ್ದಾಲಿಸಲು ಆಮ್ ಆದ್ಮಿ ಪಕ್ಷಕ್ಕೆ ಅಧಿಕಾರ ಕೊಟ್ಟವರ್ಯಾರು ಎಂದು ದೆಹಲಿಯ ಬಿಜೆಪಿ ಮುಖಂಡ ಸತೀಶ್ ಉಪಾಧ್ಯಾಯ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com