೧೫ರಿಂದ ಸ್ವಚ್ಛ ಭಾರತಕ್ಕೆ ಸೆಸ್

ಸ್ವಚ್ಛ ಭಾರತ ಯೋಜನೆಗೆ ನಿಧಿ ಸಂಗ್ರಹಿಸಲು ಕೇಂದ್ರ ಸರ್ಕಾರ ಎಲ್ಲ ಸೇವೆಗಳಿಗೂ ಶೇ. ೦.೫ ಹೆಚ್ಚುವರಿ ಸೆಸ್ ವಿಧಿಸಲು ಮುಂದಾಗಿದೆ...
ಸ್ವಚ್ಛ ಭಾರತ ಅಭಿಯಾನ (ಸಂಗ್ರಹ ಚಿತ್ರ)
ಸ್ವಚ್ಛ ಭಾರತ ಅಭಿಯಾನ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಸ್ವಚ್ಛ ಭಾರತ ಯೋಜನೆಗೆ ನಿಧಿ ಸಂಗ್ರಹಿಸಲು ಕೇಂದ್ರ ಸರ್ಕಾರ ಎಲ್ಲ ಸೇವೆಗಳಿಗೂ ಶೇ. ೦.೫ ಹೆಚ್ಚುವರಿ ಸೆಸ್ ವಿಧಿಸಲು ಮುಂದಾಗಿದೆ. ನ.೧೫ ರಿಂದ ವಿಮಾನ ಪ್ರಯಾಣ, ದೂರವಾಣಿ, ಹೋಟೆಲ್ ಸೇವೆ, ಬ್ಯಾಂಕಿಂಗ್ ಸೇರಿದಂತೆ ಎಲ್ಲ ಸೇವೆಗಳಿಗೂ ಈ ಸೆಸ್ ಅನ್ವಯವಾಗಲಿದೆ.

ಈಗಾಗಲೇ ವಿಧಿಸಲಾಗಿರುವ ೧೪ ಶೇಕಡ ಸೇವಾ ತೆರಿಗೆಯ ಮೇಲಿನಿಂದ ಈ ಸೆಸ್ ಅನ್ವಯವಾಗುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ರು.೪೦೦ ಕೋಟಿ ಹೆಚ್ಚುವರಿ ಹಣಕಾಸು ತಂದು ಕೊಡಲಿದೆ.  ಈ ವರ್ಷದ ಬಜೆಟ್ ಮಂಡನೆ ವೇಳೆ ವಿತ್ತ ಸಚಿವ ಅರುಣ್ ಜೇಟ್ಲಿ ಸೇವೆಗಳ ಮೇಲೆ ಅಗತ್ಯಬಿದ್ದರೆ ಶೇ.೨ರಷ್ಟು ಲೆವಿ ವಿಧಿಸುವ ವಿಚಾರ ಪ್ರಸ್ತಾಪಿಸಿದ್ದರು.

ಹೊಸ ತೆರಿಗೆಯಂತೆ, ನೀವು ಪಡೆಯುವ  ಪ್ರತಿ ನೂರು ರುಪಾಯಿ ಮೌಲ್ಯದ ಸೇವೆಗೂ ೦.೫೦ ಪೈಸೆ ಸ್ವಚ್ಛ ಭಾರತ ನಿಧಿಗೆ ನಿಡಬೇಕು. ಸ್ವಚ್ಛ ಭಾರತ ತೆರಿಗೆಯು ಪ್ರತಿ ಪ್ರಜೆಯೂ ಈ ಯೋಜನೆಗೆ ದೇಣಿಗೆ ನೀಡುವಂತೆ ಮಾಡುವ ಒಂದು ಉಪಕ್ರ ಮ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ. ಇದೀಗ ಆರೋಗ್ಯ ಯೋಜನೆಗಳಿಗಾಗಿ ವಾರ್ಷಿಕ ರು.೬೭೦೦ ಕೋಟಿ ವ್ಯಯ ಮಾಡಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com