ಮೋದಿ ಪತ್ನಿಗಿಲ್ಲ ಪಾಸ್ಪೋರ್ಟ್

ಜಶೋದಾಬೆನ್ ಅವರ ಪಾಸ್ ಪೋರ್ಟ್ ಅರ್ಜಿಯನ್ನು ಗುಜರಾತ್‍ನ ಪ್ರಾದೇಶಿಕ ಪಾಸ್‍ಪೋರ್ಟ್ ಕಚೇರಿ ತಿರಸ್ಕರಿಸಿದೆ...
ಜಶೋದಾಬೆನ್
ಜಶೋದಾಬೆನ್
ಅಹಮದಾಬಾದ್: ಜಶೋದಾಬೆನ್ ಅವರ ಪಾಸ್ ಪೋರ್ಟ್ ಅರ್ಜಿಯನ್ನು ಗುಜರಾತ್‍ನ ಪ್ರಾದೇಶಿಕ ಪಾಸ್‍ಪೋರ್ಟ್ ಕಚೇರಿ ತಿರಸ್ಕರಿಸಿದೆ. ಇದರಲ್ಲೇನಿದೆ ವಿಶೇಷ ಅಂತೀರಾ? ಜಶೋದಾಬೆನ್ ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ. 
ಈಗ ಮೋದಿಯ ವರಿಂದ ದೂರವಿರುವ ಇವರ ಪಾಸ್‍ಪೋರ್ಟ್ ಅರ್ಜಿ ಅಪೂರ್ಣವಾಗಿದೆ ಎಂಬ ಕಾರಣದಿಂದ ತಿರಸ್ಕೃತಗೊಂಡಿರುವುದಾಗಿ ಕಚೇರಿಯ ಅಧಿಕಾರಿ ಖಾನ್ ತಿಳಿಸಿದ್ದಾರೆ.
ಜಶೋದಾಬೆನ್ ಮ್ಯಾರೇಜ್ ಸರ್ಟಿಫಿಕೇಟ್ ಅಥವಾ ಪತಿಯೊಂದಿಗಿನ ಜಂಟಿ ಅಫಿಡವಿಟ್ ಸಲ್ಲಿಸಿರದ ಕಾರಣ ಕಚೇರಿ ಒಪ್ಪಿಕೊಂಡಿಲ್ಲ. 
ಅವರೆಡರಲ್ಲಿ ಒಂದಾದರೂ ದಾಖಲೆ ಅವಶ್ಯ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದು, ಇದರಿಂದಾಗಿ ಜಶೋದಾ ತಮ್ಮ ನೆಂಟರಿಷ್ಟರ ಭೇಟಿಗೆ ಪ್ಲಾನ್ ಮಾಡಿದ್ದ ವಿದೇಶ ಪ್ರವಾಸ ವಿಳಂಬಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com