ಬಾಬಾ ರಾಮದೇವ್ ಪತಂಜಲಿ ಅಟ್ಟಾ ನೂಡಲ್ಸ್ ಗೆ ಟ್ರಬಲ್

ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಅಟ್ಟಾ ನೂಡಲ್ಸ್ ಗೆ ತೊಂದರೆ ಎದುರಾಗಿದೆ. ಪತಂಜಲಿ ನೂಡಲ್ಸ್ ಮಾರಾಟ ಮಾಡಲು ಅನುಮೋದನೆ ಪಡೆದಿಲ್ಲ ...
ಪತಂಜಲಿ ನೂಡಲ್ಸ್
ಪತಂಜಲಿ ನೂಡಲ್ಸ್

ನವದೆಹಲಿ: ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಅಟ್ಟಾ ನೂಡಲ್ಸ್ ಗೆ ತೊಂದರೆ ಎದುರಾಗಿದೆ. ಪತಂಜಲಿ ನೂಡಲ್ಸ್ ಮಾರಾಟ ಮಾಡಲು ಅನುಮೋದನೆ ಪಡೆದಿಲ್ಲ ಎಂದು ಭಾರತದ ಆಹಾರ ಸುರಕ್ಷತೆ ಮತ್ತು ನಿಯಂತ್ರಣ ಪ್ರಾಧಿಕಾರ ತಿಳಿಸಿದೆ.

ಪತಂಜಲಿ ನೂಡಲ್ಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು ಎಫ್ ಎಸ್ ಎಸ್ ಎ ಐ ಅನುಮತಿ ಪಡೆದಿಲ್ಲ, ಇದು ತಮ್ಮ ಗಮನಕ್ಕೆ ಬಂದಿದ್ದು, ಪರಿಶೀಲನೆ ನಡೆಸುವುದಾಗಿ ಭಾರತದ ಆಹಾರ ಸುರಕ್ಷತೆ ಮತ್ತು ನಿಯಂತ್ರಣ ಪ್ರಾಧಿಕಾರ ಅಧ್ಯಕ್ಷೆ ಆಶಿಶ್ ಬಹುಗುಣ ಹೇಳಿದ್ದಾರೆ.

ಇನ್ನು ಪತಂಜಲಿ ನೂಡಲ್ಸ್ ಪ್ಯಾಕೆಟ್ ಮೇಲೆ ಭಾರತದ ಆಹಾರ ಸುರಕ್ಷತೆ ಮತ್ತು ನಿಯಂತ್ರಣ ಪ್ರಾಧಿಕಾರದಿದಂ ಅನುಮತಿ ಪಡೆಯಲಾಗಿದೆ ಎಂಬ ಲೈಸೆನ್ಸ್ ನ ಸಂಖ್ಯೆ ನಮೂದಿಸಿರುವುದು ಆಶ್ಚರ್ಯ ತಂದಿದೆ ಎಂದು ಎಫ್ ಎಸ್ ಎಸ್ ಎ ಐ ಅಧಿಕಾರಿಗಳು ಹೇಳಿದ್ದಾರೆ.

ಅನುಮತಿ ಪಡೆಯದೇ ಲೈಸೆನ್ಸ್ ಸಂಖ್ಯೆ ನಮೂದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭಾರತದ ಆಹಾರ ಸುರಕ್ಷತೆ ಮತ್ತು ನಿಯಂತ್ರಣ ಪ್ರಾಧಿಕಾರ  ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com