

ಪಾಟ್ನಾ: ಮದ್ಯ ನಿಷೇಧ ಮಾಡುವುದಕ್ಕೆ ಬಿಹಾರ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಲಿದೆ ಎಂದು ಬಿಹಾರದ ಅಬಕಾರಿ ಸಚಿವ ಅಬ್ದುಲ್ ಜಲಿಲ್ ಮಸ್ತಾನ್ ಹೇಳಿದ್ದಾರೆ.
ಬಿಹಾರದಲ್ಲಿ ಜೆಡಿಯು ನೇತೃತ್ವದ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಅಬ್ದುಲ್ ಜಲಿಲ್ ಮಸ್ತಾನ್ ಅಬಕಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಮದ್ಯ ನಿಷೇಧಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಮದ್ಯ ನಿಷೇಧಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಳ್ಳಲಿರುವ ಕ್ರಮದ ಪರಿಣಾಮ ಆರು ತಿಂಗಳಲ್ಲಿ ಗೋಚರವಾಗಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ. ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವುದಾಗಿ ಪ್ರಣಾಳಿಕೆಯಲ್ಲಿ ನಿತೀಶ್ ಕುಮಾರ್ ಘೋಷಿಸಿದ್ದರು. ಬಿಹಾರದಲ್ಲಿರುವ ದಲಿತ ಮಹಿಳೆಯರು ಮದ್ಯ ನಿಷೇಧಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ, ಈ ಹಿನ್ನೆಲೆಯಲ್ಲಿ ಮದ್ಯ ನಿಷೇಧ ಮಾಡುವುದಾಗಿ ಅಬ್ದುಲ್ ಜಲಿಲ್ ಮಸ್ತಾನ್ ಹೇಳಿದ್ದಾರೆ.