ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬ್ರಿಟನ್ ಪೌರತ್ವ ವಿವಾದಕ್ಕೆ ಸಂಬಂಧಿಸಿದಂತೆ ಶೀಘ್ರ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ. ಬ್ರಿಟನ್ ಕಂಪನಿ ದಾಖಲೆಯಲ್ಲಿ ತಾನು ಆ ರಾಷ್ಟ್ರದ ಪ್ರಜೆ ಎಂದು ರಾಹುಲ್ ಘೋಷಿಸಿಕೊಂಡಿದ್ದಾರೆ ಎಂದು ಹೇಳಲಾಗಿರುವ ಬಗ್ಗೆ ಸಿಬಿಐ ತನಿಖೆಯಾಗಬೇಕೆಂದು ಕೋರ್ಟ್‍ಗೆ ಪಿಐಎಲ್ ಸಲ್ಲಿಕೆಯಾಗಿತ್ತು. ವಕೀಲ ಎಂ.ಎಲ್. ಶರ್ಮಾ ಮೂಲಕ ಬಿಜೆಪಿ ನಾಯಕ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಅದನ್ನು ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರಿದ್ದ ನ್ಯಾಯಪೀಠ, ಪ್ರಕರಣ ಅಂಥ ತುರ್ತಿನದ್ದೇನಲ್ಲ ಎಂದು ಅಭಿ ಪ್ರಾಯಪಟ್ಟಿದೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಡಾ.ಸ್ವಾಮಿ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಜತೆಗೆ ಸ್ಪೀಕರ್‍ಗೆ ಪತ್ರ ಬರೆದು ರಾಹುಲ್ ಸದಸ್ಯತ್ವ ಅನೂರ್ಜಿತಕ್ಕೆ ಒತ್ತಾಯಿಸಿದ್ದರು.