ಕಾನ್ವೆಂಟ್ ಬಾವಿಯಲ್ಲಿ ಕ್ರೈಸ್ತ ಸನ್ಯಾಸಿನಿ ಶವ ಪತ್ತೆ

ಕೇರಳದ ಇಡುಕ್ಕಿ ಜಿಲ್ಲೆಯ ವಾಗಮೋನ್‌ ಸಮೀಪದ ಕಾನ್ವೆಂಟ್‌ ಬಾವಿಯಲ್ಲಿ ಕ್ರೈಸ್ತ ಸನ್ಯಾಸಿನಿಯೊಬ್ಬರ ಶವ ಪತ್ತೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಚ್ಚಿ: ಕೇರಳದ ಇಡುಕ್ಕಿ ಜಿಲ್ಲೆಯ ವಾಗಮೋನ್‌ ಸಮೀಪದ  ಕಾನ್ವೆಂಟ್‌ ಬಾವಿಯಲ್ಲಿ ಕ್ರೈಸ್ತ ಸನ್ಯಾಸಿನಿಯೊಬ್ಬರ ಶವ ಪತ್ತೆಯಾಗಿದೆ.

ಸ್ಟೆಲ್ಲಾ ಮರಿಯಾ ಮೃತ ಸನ್ಯಾಸಿನಿ ಎಂದು ಗುರುತಿಸಲಾಗಿದೆ. ಈಕೆ ವಾಗಮೋನ್‌ನಿಂದ ಹತ್ತು ಕಿ.ಮೀ. ದೂರದ ಉಳಪುನ್ನಿ ಎಂಬಲ್ಲಿ ಸೆಕ್ರೆಡ್‌ ಹಾರ್ಟ್‌ ಕಾನ್ವೆಂಟ್‌ನ ಸದಸ್ಯರಾಗಿದ್ದರು, ಮರಿಯಾ ಅವರ ಸಾವು ನಿಗೂಢವಾಗಿದ್ದು ತನಿಖಾಧಿಕಾರಿಗಳ ತಂಡ ಆಗಮಿಸಿ ತನಿಖೆ ಮುಂದುವರಿಸಿದೆ.

ಈ ವರ್ಷ ಸೆಪ್ಟಂಬರ್‌ನಲ್ಲಿ 69 ವರ್ಷದ ಸಿಸ್ಟರ್‌ ಅಮಲಾ ಎಂಬಾಕೆ ಕೊಟ್ಟಾಯಂ ಸಮೀಪದ ಪಾಳಾ ಎಂಬಲ್ಲಿನ ಕಾರ್ಮೆಲ್‌ ಕಾನ್ವೆಂಟ್‌ನ ತನ್ನ ಕೋಣೆಯಲ್ಲಿ ಕೊಲೆಯಾಗಿದ್ದರು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಸತೀಶ್‌ ಬಾಬು ಎಂಬಾತನನ್ನು ಬಂಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com