ರಾಹುಲ್ ಗಾಂಧಿ
ದೇಶ
ಕೆಲಸ ಮಾಡದೆಯೂ ವೇತನ ಪಡೆದುಕೊಂಡ ರಾಹುಲ್ ಗಾಂಧಿ!
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೆಲಸ ಮಾಡದಿದ್ದರೂ ಸಂಸದರಿಗೆ ನೀಡುವ ಸಂಬಳ ತೆಗೆದು ಕೊಂಡಿದ್ದಾರೆ...
ನವದೆಹಲಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೆಲಸ ಮಾಡದಿದ್ದರೂ ಸಂಸದರಿಗೆ ನೀಡುವ ಸಂಬಳ ತೆಗೆದು ಕೊಂಡಿದ್ದಾರೆ ಎಂದು ಆರ್ ಎಸ್ ಎಸ್ ಮುಖವಾಣಿ ಆರ್ಗನೈಸರ್ ಪತ್ರಿಕೆ ಆರೋಪಿಸಿದೆ.
2015ರ ಫೆಬ್ರವರಿ -ಮಾರ್ಚ್ ನಲ್ಲಿ 56 ದಿನಗಳ ಕಾಲ ನಾಪತ್ತೆಯಾಗಿದ್ದ ರಾಹುಲ್ ಗಾಂಧಿ ಸಂಸತ್ ಅಧಿವೇಶನಕ್ಕೂ ಹಾಜರಾಗಿರಲಿಲ್ಲ. ಆದರೆ 2 ತಿಂಗಳ ಸಂಸದರ ವೇತನ ಮತ್ತೆ ಭತ್ಯೆಯನ್ನು ರಾಹುಲ್ ಗಾಂಧಿ ಪಡೆದಿದ್ದಾರೆ ಎಂದು ವರದಿ ಮಾಡಿದೆ.
ಸಂಸತ್ ಸದಸ್ಯರಿಗೆ ಸರ್ಕಾರ ಪ್ರತಿ ತಿಂಗಳು 50 ಸಾವಿರ ಸಂಬಳ ಹಾಗೂ 2 ಸಾವಿರ ರೂಪಾಯಿ ಭತ್ಯೆನೀಡುತ್ತದೆ.56 ದಿನಗಳ ಕಾಲ ರಜೆಯಲ್ಲಿದ್ದರೂ ಸಂಸದರಿಗೆ ಸಿಗುವ ಎಲ್ಲಾ ಲಾಭಗಳನ್ನು ರಾಹುಲ್ ಗಾಂಧಿ ಪಡೆದುಕೊಂಡಿದ್ದಾರೆ ಎಂದು ಪತ್ರಿಕೆಯಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ