ಕತ್ತರಿಸಿದ ಪತ್ನಿ ರುಂಡವನ್ನು ಹಿಡಿದು ರಾಜರೋಷವಾಗಿ ತಿರುಗಾಡಿದ ಪತಿ

ಪತ್ನಿಯ ತಲೆ ಕತ್ತರಿಸಿದ 53 ವರ್ಷದ ವ್ಯಕ್ತಿಯೊಬ್ಬ, ಆಕೆಯ ತಲೆ ಬುರುಡೆಯನ್ನು ಹಿಡಿದು ರಸ್ತೆಯಲ್ಲಿ ರಾಜರೋಷವಾಗಿ...
ಕತ್ತರಿಸಿದ ಪತ್ನಿ ರುಂಡವನ್ನು ಹಿಡಿದು ರಾಜರೋಷವಾಗಿ ತಿರುಗಾಡಿದ ಪತಿಯನ್ನು ಬಂಧಿಸುತ್ತಿರುವ ಪೊಲೀಸರು
ಕತ್ತರಿಸಿದ ಪತ್ನಿ ರುಂಡವನ್ನು ಹಿಡಿದು ರಾಜರೋಷವಾಗಿ ತಿರುಗಾಡಿದ ಪತಿಯನ್ನು ಬಂಧಿಸುತ್ತಿರುವ ಪೊಲೀಸರು
ಪುಣೆ: ಪತ್ನಿಯ ತಲೆ ಕತ್ತರಿಸಿದ 53 ವರ್ಷದ ವ್ಯಕ್ತಿಯೊಬ್ಬ, ಆಕೆಯ ತಲೆ ಬುರುಡೆಯನ್ನು ಹಿಡಿದು ರಸ್ತೆಯಲ್ಲಿ ರಾಜರೋಷವಾಗಿ ಓಡಾಡುತ್ತಿದ್ದ ಘಟನೆ ಪುಣೆಯಲ್ಲಿ ನಡೆದಿದೆ.
ಪುಣೆಯ ಕಟ್ರಾಜ್ ಪ್ರದೇಶದಲ್ಲಿರುವ ರಾಮು ಚವಣ್ ಎಂಬ ವ್ಯಕ್ತಿ ತನ್ನ ಹೆಂಡತಿಯ ತಲೆ ಕತ್ತರಿಸಿ, ರುಂಡ ಮತ್ತು ಕಡಿಯಲು ಬಳಸಿದ್ದ ಕತ್ತಿಯನ್ನು ಹಿಡಿದು ರಸ್ತೆಯಲ್ಲಿ ಓಡಾಡುತ್ತಿದ್ದನು. ಇದನ್ನು ಕಂಡ ಇಬ್ಬರು ಪೊಲೀಸರು ಆತನ ಕೈಯಲ್ಲಿದ್ದ ಕತ್ತಿಯನ್ನು ಪಡೆಯಲು ಅರಸಾಹಸ ಮಾಡಿದ್ದು, ಕೊನೆಗೆ ಆರೋಪಿಯನ್ನು ಬಂಧಿಸಿದ್ದಾರೆ.
ಪುಣೆಯಲ್ಲಿರುವ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com