ದಾದ್ರಿ ಪ್ರಕರಣದಿಂದ ಕಂಗೆಟ್ಟಿದ್ದ ಮುಸ್ಲಿಂ ಕುಟುಂಬವೊಂದು ತಮ್ಮ ಹೆಣ್ಣು ಮಕ್ಕಳಿಬ್ಬರ ವಿವಾಹ ಸಮಾರಂಭವನ್ನು ಗ್ರಾಮದಿಂದ ಹೊರಗೆ ಏರ್ಪಡಿಸಲು ತೀರ್ಮಾನಿಸಿದ್ದರು. ಆದರೆ ಹಿಂದೂಗಳು ನಾವಿದ್ದೇವೆ ಯಾವುದೇ ಆತಂಕ ಬೇಡ ಎಂದು ಹೇಳಿ ಮದುವೆ ಕಾರ್ಯಕ್ರಮದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಕೋಮು ಸಾಮರಸ್ಯ ನಮ್ಮಲ್ಲಿ ಇನ್ನೂ ಉತ್ತಮವಾಗಿದೆ ಎಂಬುವುದನ್ನು ತೋರಿಸಿದ್ದಾರೆ.