

ನವದೆಹಲಿ: ಬಿಹಾರ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಸೋತರೆ ಪಟಾಕಿಗಳು ಪಾಕಿಸ್ತಾನದಲ್ಲಿ ಸಿಡಿಯುತ್ತದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗುರುವಾರ ಹೇಳಿದ್ದಾರೆ.
ಬಿಹಾರ ಚುನಾವಣೆ ಪ್ರಯುಕ್ತ ಬಾಘಾದ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಬಿಹಾರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು ಎಂಬುದು ನಮ್ಮ ಉದ್ದೇಶ. ಒಂದು ವೇಳೆ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದೇ ಆದರೆ, ಸಂತಸ, ಸಡಗರಕ್ಕಾಗಿ ಹಚ್ಚುವ ಪಟಾಕಿಗಳ ಶಬ್ಧ ಪಾಕಿಸ್ತಾನದಲ್ಲಿ ಮೊಳಗುತ್ತದೆ. ಇದು ನಿಮಗೆ ಬೇಕಾ ಎಂದು ಪ್ರಶ್ನಿಸಿದ್ದಾರೆ.
ಬಿಹಾರದಲ್ಲಿ ಒಂದು ವೇಳೆ ಲಾಲೂ ಪ್ರಸಾದ್ ಯಾದವ್-ನಿತೀಶ್ ಕುಮಾರ್ ಅಧಿಕಾರಕ್ಕೆ ಬಂದಿದ್ದೇ ಆದರೆ ಅದರ ಫಲಿತಾಂಶ ಪಾಟ್ನದಲ್ಲೇ ಇರುತ್ತದೆ. ಆದರೆ, ಸಂತಸ ಪಟಾಕಿಗಳು ಪಾಕಿಸ್ತಾನದಲ್ಲಿ ಸಿಡಿಯುತ್ತದೆ. ನಿಮ್ಮ ಮತವನ್ನು ಉಗ್ರರನ್ನು ನಿಗ್ರಹ ಮಾಡುವ ರಾಷ್ಟ್ರೀಯ ಪಕ್ಷಕ್ಕೆ ನೀಡಿ ಎಂದು ಹೇಳಿದ್ದಾರೆ.