

ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಇನ್ನು ಒಂದು ವರ್ಷದವರೆಗೆ ಸೋನಿಯಾ ಗಾಂಧಿಯವರ ಅಧ್ಯಕ್ಷಾವಧಿಯನ್ನು ವಿಸ್ತರಿಸಿದೆ.ಅಲ್ಲದೆ ಪಕ್ಷದ ಸಂಘಟನಾ ಚುನಾವಣೆಯ ಪ್ರಕ್ರಿಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮೂಲಕ ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗಬಹುದೆಂಬ ನಿರೀಕ್ಷೆ ಸದ್ಯಕ್ಕೆ ನಿಡವಾಗುವ ಲಕ್ಷಣ ಕಾಣುತ್ತಿಲ್ಲ. ಅವರು ಉಪಾಧ್ಯಕ್ಷರಾಗಿಯೇ ಸದ್ಯಕ್ಕೆ ಮುಂದುವರಿಯಲಿದ್ದಾರೆ.
ಆದರೆ ಕೇಂದ್ರ ಸರ್ಕಾರದ ಉದ್ದೇಶಿತ ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯುವಲ್ಲಿ ರಾಹುಲ್ ಗಾಂಧಿಯವರ ಹೋರಾಟ ಮತ್ತು ಅವರ ವರ್ಚಸ್ಸು ಪ್ರಮುಖ ಕಾರಣ ಎಂಬುದನ್ನು ಬಿಂಬಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಧರಿಸಿರುವ ಹಾಗಿದೆ.
ಪಕ್ಷದಲ್ಲಿ ಎರಡು ಪ್ರಮುಖ ತಿದ್ದುಪಡಿಗಳನ್ನು ಕಾಂಗ್ರೆಸ್ ಮಾಡಿದೆ. ಅದು, ಪಕ್ಷದ ಸಕ್ರಿಯ ಮತ್ತು ಸಾಧಾರಣ ಕಾರ್ಯಕರ್ತ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವುದು ಮತ್ತು ಪಕ್ಷದ ಪದಾಧಿಕಾರಿಗಳ ಅಧಿಕಾರಾವಧಿಯನ್ನು ಐದು ವರ್ಷಗಳಿಂದ ಮೂರು ವರ್ಷಕ್ಕೆ ಇಳಿಸುವುದಾಗಿದೆ.